ಭಾನುವಾರ, ಮಾರ್ಚ್ 3, 2013

-ಮಂಜುನಾಥ ಉದ್ಯಾವರ ಪ್ರಶಸ್ತಿ ಪುರಸ್ಕೃತರು-
ಮಂಜುನಾಥ ಉದ್ಯಾವರರು ಕೇಂದ್ರದ ಮಾಜಿ ಸಚಿವ ಓಸ್ಕರ್ ಫೆರ್ನಾಂಡಿಸರ ಆಪ್ತಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದವರು. ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ ಯಾವುದೇ ಅಬ್ಬರವಿಲ್ಲದೆ ತಮ್ಮನ್ನು ತೊಡಗಿಸಿಕೊಂಡ ಮಂಜುನಾಥ ಉದ್ಯಾವರರು ಅಕಾಲಿಕ ಮರಣಕ್ಕೆ ತುತ್ತಾದುದು ವಿಧಿಯ ವಿಪಯರ್ಯಾಸ. ಅವರ  ಸೇವೆ, ಸಾಧನೆಗಳನ್ನು ಸದಾ ಸ್ಮರಿಸಲು ಉದ್ಯಾವರದ ಫ್ರೆಂಡ್ಸ್ ಸರ್ಕಲ್ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಅರ್ಹರನ್ನು ಗುರುತಿಸಿ, ಪುರಸ್ಕರಿಸಲು ನಿರ್ಧರಿಸಿದೆ. ಮಂಜುನಾಥ ಉದ್ಯಾವರರ ಜನ್ಮದಿನವಾದ ಮಾರ್ಚ್ 16 ರಂದು ನೀಡಲಾಗುವ ಈ ಪ್ರಶಸ್ತಿಗೆ  ಈ ಕೆಳಗಿನ ಐದು ಮಂದಿ ಆಯ್ಕೆಯಾಗಿರುತ್ತಾರೆ.
1.    ಬನ್ನಂಜೆ ಸಂಜೀವ ಸುವರ್ಣ:
    ಉಡುಪಿ ಯಕ್ಷಗಾನ ಕೇಂದ್ರದ ಗುರುಗಳಾಗಿರುವ ಸಂಜೀವ ಸುವರ್ಣರು 12 ಸೆಪ್ಟೆಂಬರ್ 1955 ರಲ್ಲಿ ಜನಿಸಿದರು.  ಭಾಗವತ ಗುಂಡಿಬೈಲು ನಾರಾಯಣ ಶೆಟ್ಟಿ, ಮೆಟ್ಕಲ್ ಕೃಷ್ಣಯ್ಯ ಶೆಟ್ಟಿ ಮತ್ತು ಮಾರ್ಗೋಳಿ ಗೋವಿಂದ ಸೇರೆಗಾರರಲ್ಲಿ ಯಕ್ಷಗಾನದ ಪ್ರಾಥಮಿಕ ಶಿಕ್ಷಣವನ್ನು ಪಡೆದರು. 1971-74 ರ ಅವಧಿಯಲ್ಲಿ ಉಡುಪಿ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಯಾಗಿ ಆರಂಭದಲ್ಲಿ ಕಲಿತ ಕಲಿಕೆಗೆ ಯಕ್ಷಗಾನದ ಪರಂಪರೆ ಶೈಲಿಯ ಮೆರುಗನ್ನು ಗಳಿಸಿಕೊಂಡರು. ಬಳಿಕ ವಿವಿಧ ಮೇಳಗಳಲ್ಲಿ ವೃತ್ತಿ ಕಲಾವಿದರಾಗಿ ಗುರುತಿಸಿಕೊಂಡ ಸಂಜೀವರು 1984 ರಲ್ಲಿ ಯಕ್ಷಗಾನ ಕೇಂದ್ರದ ಗುರುಗಳಾಗಿ ನೇಮಕಗೊಂಡರು. ಡಾ.ಶಿವರಾಮ ಕಾರಂತರ ಯಕ್ಷರಂಗದ ಮೂಲಕ ವಿದೇಶಗಳಲ್ಲೂ ಪ್ರದರ್ಶನ ನೀಡಿದ ಸುವರ್ಣರು, ಯಕ್ಷಗಾನ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳ ಸಾಧ್ಯತೆಗಳನ್ನೂ ತೋರಿಸಿಕೊಟ್ಟವರು. ಪ್ರಸ್ತುತ ಯಕ್ಷಗಾನ ಕೇಂದ್ರದ ಪ್ರಾಂಶುಪಾಲರಾಗಿರುವ ಸುವರ್ಣರ ಸಾಧನೆಗಳ ಹಿಂದೆ ಡಾ.ಕಾರಂತ, ಗುರು ವೀರಭದ್ರ ನಾಯಕ್, ನೀಲಾವರ ರಾಮಕೃಷ್ಣಯ್ಯ, ಮಹಾಬಲ ಕಾರಂತ ಮೊದಲಾದ ಯಕ್ಷದಿಗ್ಗಜರ ಮಾರ್ಗದರ್ಶನವಿದೆ.
2.    ಡಾ.ಶ್ರೀಪಾದ ಭಟ್ಟ:
ಉತ್ತರಕನ್ನಡದ ಶಿರಸಿಯಲ್ಲಿ ಕನ್ನಡ ಅಧ್ಯಾಪಕರಾಗಿರುವ ಡಾ.ಶ್ರೀಪಾದ ಭಟ್ಟರು ರಂಗಭೂಮಿ ಕ್ಷೇತ್ರದಲ್ಲಿ ಸಾಧನೆಗಳ ಮೂಲಕ ರಾಜ್ಯದ ಗಮನ ಸೆಳೆದವರು. ಉತ್ತರ ಕನ್ನಡ ಜಿಲ್ಲೆಯ ರಂಗಭೂಮಿ ಎಂಬ ವಿಚಾರದ ಕುರಿತು ಮಂಡಿಸಿದ ಪ್ರೌಢ ಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪ್ರದಾನ ಮಾಡಿ ಗೌರವಿಸಿದೆ. ಈಗಾಗಲೇ 100 ಕ್ಕೂ ಅಧಿಕ ನಾಟಕಗಳನ್ನು ನಿರ್ದೇಶಿಸಿರುವ ಶ್ರೀಪಾದರು, 50 ಕ್ಕೂ ಹೆಚ್ಚು ನಾಟಕಗಳಿಗೆ ಸಂಗೀತ ಸಂಯೋಜಿಸಿರುತ್ತಾರೆ.  ಅವರು ನಿರ್ದೇಶಿಸಿದ ಹಲವು ನಾಟಕಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಭಾಜನವಾಗಿವೆ. ಹಲವು ಕೃತಿಗಳನ್ನು ರಚಿಸಿರುವ ಶ್ರೀಪಾದ ಭಟ್ಟರಿಗೆ ಅನೇಕ ಪ್ರಶಸ್ತಿಗಳೂ ಒಲಿದಿದ್ದು, ರಾಜ್ಯ ಸರಕಾರದ ಉತ್ತಮ ಶಿಕ್ಷಕ ಪ್ರಶಸ್ತಿ(2009-10) ಗಮನಾರ್ಹ.
3.    ಎಚ್.ಎಸ್.ಉಮೇಶ್:
ಮೈಸೂರಿನ ಶಾರದಾವಿಲಾಸ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾಗಿರುವ ಪ್ರೊ.ಎಚ್.ಎಸ್. ಉಮೇಶ್ ರಾಜ್ಯದ ಶ್ರೇಷ್ಠ ಶಿಕ್ಷಣತಜ್ಞರಲ್ಲಿ ಒಬ್ಬರು. ಮೈಸೂರು ವಿ.ವಿ.ಯ ಸಿಂಡಿಕೇಟ್ ಸದಸ್ಯರಾಗಿ ಸೇವೆ ಸಲ್ಲಿಸಿರುವ ಉಮೇಶರು ಶಿಕ್ಷಣಕ್ಕೆ ಸಂಬಂಧಿಸಿದಂತೆ ಹಲವು ಸಮಿತಿಗಳ ಸದಸ್ಯರೂ ಆಗಿರುತ್ತಾರೆ. ಸುಮಾರು 25 ಕ್ಕೂ ಅಧಿಕ ಕೃತಿಗಳನ್ನು ಬರೆದಿರುವ ಇವರು ಪ್ರಸಿದ್ಧ ನಟ ಹಾಗೂ ನಾಟಕ ನಿರ್ದೇಶಕರೂ ಹೌದು. ಕನ್ನಡದ ಖ್ಯಾತ ನಾಟಕಕಾರರ ನಾಟಕಗಳನ್ನು ಕೈಗೆತ್ತಿಕೊಂಡು ಸಮರ್ಥವಾಗಿ ನಿರ್ದೇಶಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿ ಪಡೆದಿರುವ ಶ್ರೀಯುತರು ಅರುಹು ಕುರುಹು ಎಂಬ ತ್ರೈಮಾಸಿಕ ಪತ್ರಿಕೆಯ ಸಂಪಾದಕರೂ ಆಗಿರುತ್ತಾರೆ.
4.ಪಾಸ್ಟರ್ ಸುನಿಲ್ ಡಿ'ಸೋಜಾ:
    1974, ಮೇ 27 ರಂದು ಜನಿಸಿದ ಸುನಿಲ್ ಡಿ'ಸೋಜಾ ಸಾಮಾಜಿಕ ಸೇವೆಯಲ್ಲಿ ಪ್ರಚಾರಕ್ಕಿಳಿಯದೆ ಸೇವೆ ಸಲ್ಲಿಸುತ್ತಿರುವವರು. ಎಂಟನೆಯ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ ಸುನಿಲ್ ಬಳಿಕ ಕೆಲವು ಕಾಲ ಬಹರೈನ್ ದೇಶದಲ್ಲಿ ನೆಲೆಸಿದರು. ಮತ್ತೆ ಭಾರತಕ್ಕೆ ಮರಳಿದ ಸುನಿಲ್ ಬಳಿಕ ವಿಶಿಷ್ಟ ರೀತಿಯ ಸಾಮಾಜಿಕ ಸೇವೆಗೆ ತಮ್ಮನ್ನು ತೊಡಗಿಸಿಕೊಂಡರು. ಬಡ, ಅನಾಥ ಮತ್ತು ಬುದ್ಧಿಮಾಂದ್ಯ ಮಕ್ಕಳ ಶುಶ್ರೂಷೆಯತ್ತ ಇವರ ಚಿತ್ತ ಹೊರಳಿತು. ಈ ಉದ್ದೇಶಕ್ಕಾಗಿ ಒಂದು ಟ್ರಸ್ಟನ್ನೂ  ಶಂಕರಪುರದಲ್ಲಿ ಹುಟ್ಟು ಹಾಕಿದರು. ಕೇವಲ ಐದು ಸೆಂಟ್ಸ್ ಜಾಗದಲ್ಲಿ ಆರಂಭವಾದ ಈ ಟ್ರಸ್ಟ್ ಇದೀಗ ತನ್ನ ಪ್ರಾಮಾಣಕಿ ಸೇವೆಯಿಂದ 78 ಸೆಂಟ್ಸ್ ಸ್ಥಳವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಜೂನ್ 6, 2007 ರಂದು ಮಾನಸಿಕ ಅಸ್ವಸ್ಥ ಮಹಿಳೆಯರ ಪುನರ್ವಸತಿ ಕೇಂದ್ರ ವಿಶ್ವಾಸದ ಮನೆ ಉದ್ಘಾಟನೆಗೊಂಡಿತು. 2008 ರಲ್ಲಿ ಅನಾಥ ಮತ್ತು ಆರ್ಥಿಕವಾಗಿ ಸೊರಗಿ ವಿದ್ಯಾಭ್ಯಾಸ ಮುಂದುವರಿಸಲಾಗದ ಮಕ್ಕಳಿಗೆ ಶಿಕ್ಷಣ ಮತ್ತು ವಸತಿ ನೀಡುವ ಉದ್ದೇಶದಿಂದ ವಸತಿ ನಿಲಯವನ್ನೂ ಸ್ಥಾಪಿಸಿರುವ ಈ ಟ್ರಸ್ಟ್ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಎಲ್ಲಾ ಸಾಧನೆಗಳ ಹಿಂದೆ ಸುನಿಲ್ರವರ ನಿಸ್ವಾರ್ಥ ಸೇವೆಯ ಶಕ್ತಿ ಅಡಗಿರುವುದು ಗಮನಾರ್ಹ.
5.ಚಂದ್ರಶೇಖರ ಹೆಗ್ಡೆ:
    ಬ್ರಹ್ಮಾವರದ ಎಸ್.ಎಂ.ಎಸ್.ಕಾಲೇಜಿನ ದೈಹಿಕ ಶಿಕ್ಷಕರಾಗಿರುವ ಚಂದ್ರಶೇಖರ ಹೆಗ್ಡೆಯವರು ಎಪ್ರಿಲ್ 4, 1954ರಲ್ಲಿ ಜನಿಸಿದರು. ದೈಹಿಕ ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿ ಪಡೆದ ಶ್ರೀಯುತರು ಬ್ರಹ್ಮಾವರದ ಎಸ್.ಎಂ.ಎಸ್. ಕಾಲೇಜಿನಲ್ಲಿ ದೈಹಿಕ ಶಿಕ್ಷಕರಾಗಿ ಬಳಿಕ ನೇಮಕಗೊಂಡರು.  ಬ್ರಹ್ಮಾವರವು ಕ್ರೀಡಾಕ್ಷೇತ್ರದಲ್ಲಿ ರಾಷ್ಟ್ರ ಹಾಗೂ ರಾಜ್ಯಮಟ್ಟದ ಗಮನಸೆಳೆಯುವಂತೆ ಮಾಡುವಲ್ಲಿ ಹೆಗ್ಡೆಯವರ ಪಾತ್ರ ಪ್ರಧಾನವಾದುದು. ಬ್ರಹ್ಮಾವರದಲ್ಲಿ ರಾಷ್ಟ್ರ ಮತ್ತು ರಾಜ್ಯಮಟ್ಟದ ಅನೇಕ ಕ್ರೀಡಾಕೂಟಗಳನ್ನು ಆಯೋಜಿಸಿದ ಕೀತರ್ಿ ಇವರಿಗೆ ಸಲ್ಲುತ್ತದೆ. ಬ್ರಹ್ಮಾವರದಂತಹ ಗ್ರಾಮೀಣ ಪ್ರದೇಶದ ಜನರಲ್ಲಿ ಕ್ರೀಡಾ ಸ್ಫೂತರ್ಿಯನ್ನು ಬೆಳೆಸುವ ದೃಷ್ಟಿಯಿಂದ ಆಸಕ್ತರೊಂದಿಗೆ ಕೈಜೋಡಿಸಿ ಸ್ಥಾಪಿಸಿದ ಸ್ಪೋಟ್ಸರ್್ ಕ್ಲಬ್ ಇವರ ಇನ್ನೊಂದು ಸಾಧನೆ. ಕಳೆದ ಮಾಚರ್್ 2012 ರಿಂದ ಟೀಚರ್ಸ್ ಕೋ-ಆಪರೇಟಿವ್ ಬ್ಯಾಂಕಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಹೆಗ್ಡೆಯವರು ಈ ಸ್ಥಾನವನ್ನು ಅಲಂಕರಿಸಿದ ಪ್ರಥಮ ದೈಹಿಕ ಶಿಕ್ಷಣ ನಿದರ್ೇಶಕರು.
                                ಡಾ.ಶ್ರೀಕಾಂತ್ ಸಿದ್ದಾಪುರ