ಆರಗವು ತೀರ್ಥಹಳ್ಳಿ ತಾಲೂಕಿನಲ್ಲಿದೆ. ಆರಗಕ್ಕೂ, ಪುರಂದರದಾಸರಿಗೂ ಸಂಬಂಧ ಇದೆಯೇ?. ಇತ್ತೀಚಿನ ಕೆಲವು ಸಂಶೋಧಕರ ಪ್ರಕಾರ ಪುರಂದರದಾಸರು ಆರಗದವರು. ಆಸಕ್ತಿಯಿಂದ ಅಲ್ಲಿಗೆ ಭೇಟಿ ನೀಡಿದಾಗ ತೆಗೆದ ಭಾವಚಿತ್ರ. ವಿಠಲನ ಗುಡಿ ಎಂದು ಈ ಪ್ರದೇಶವನ್ನು ಅಲ್ಲಿನ ಜನರು ಕರೆಯುತ್ತಾರೆ. ಇಲ್ಲಿ ಪುರಂದರದಾಸರು ಹುಟ್ಟಿದರಂತೆ. ಆದರೆ ಈಗ ಇಲ್ಲಿರುವುದು ವೀರಭದ್ರ ದೇವಸ್ಥಾನ. ಊರ ಜನರ ಪ್ರಕಾರ ಹಿಂದೆ ವಿಠಲನ ಪಂಥ ಇಲ್ಲಿ ಪ್ರಬಲವಾಗಿತ್ತು. ಜನಸಾಮಾನ್ಯರ ನಂಬಿಕೆಗಳನ್ನು ಕಡೆಗಣಿಸುವಂತಿಲ್ಲ. ಈ ಬಗ್ಗೆ ಸಂಶೋಧನೆ ನಡೆಯಬೇಕು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ