ಮರ್ಕಟನಿಗೂ ಮಾರುಕಟ್ಟೆ ಪಾನೀಯದ ಮೋಹವೇ ?. ಇದೀಗ ಬೇಸಿಗೆ. ವಿಪರೀತ ಬಿಸಿ. ಈ ಬಿಸಿ ನರರಿಗಷ್ಟೇ ಅಲ್ಲ. ವಾನರನಿಗೂ ತಟ್ಟಿದೆ. ಮನುಷ್ಯರು ಬಾಯಾರಿಕೆಯಾದಾಗ ಖಚರ್ಿಲ್ಲದೇ ನೀರು ಕುಡಿಯುತ್ತಾರೆ. ಹೊರಗೆ ಹೋದಾಗ ಕೆಲವರಿಗೆ ಬೇರೆಯವರ ಮನೆ ಅಥವಾ ಹೋಟೆಲಿನ ನೀರನ್ನು ಕುಡಿಯಲು ಸ್ವಲ್ಪ ಭಯ. ಏನಾದರೂ ರೋಗ ತಗಲಿದರೆ ?. ಹಾಗಾಗಿ ಬಿಸ್ಲೆರಿ ಬಾಟಲಿಗೆ ಇಂತಹವರು ಕೈಹಾಕುತ್ತಾರೆ. ಹಣ ಕೊಟ್ಟು ನೀರನ್ನು ತಮ್ಮ ದಾಹವನ್ನು ನೀಗಿಸಿಕೊಳ್ಳುತ್ತಾರೆ. ಇನ್ನು ಕೆಲವರಿಗೆ ಅಂಗಡಿ ಅಥವಾ ಹೋಟೆಲುಗಳಲ್ಲಿ ಆಕರ್ಷಕವಾಗಿ ಕಾಣಿಸುವ ತಂಪು ಪಾನೀಯದ ಮೇಲೆಯೇ ಕಣ್ಣು. ಮಾರುಕಟ್ಟೆಯಲ್ಲಿ ಇವುಗಳು ಫಾಂಟಾ, ಮಾಝಾ, ಬಿಕೊಜಾಯ್, ಕೋಲಾ ಮೊದಲಾದ ನಾನಾ ಹೆಸರುಗಳೊಂದಿಗೆ ರಾರಾಜಿಸುತ್ತಿರುತ್ತವೆ. ಮನುಷ್ಯರ ಪಾಲಿಗೆ ಇದು ಅತ್ಯಂತ ರುಚಿ. ದಾಹವನ್ನು ಕೆಲವು ಕಾಲ ಇಂಗಿಸುವ ಸಾಧನ. ಆದರೆ ಮಂಗಗಳಿಗೂ ಈ ಬಯಕೆ ಎಂದರೆ ನಿಮಗೆ ಅಚ್ಚರಿಯಾಗಬಹುದು. ವಾನರರ ಯೋಚನೆಯ ರೀತಿ ಹೀಗೆ ಇರಬಹುದು. ತಾವೇನು ಈ ಮನುಷ್ಯರಿಗೆ ಕಡಿಮೆಯೇ ?. ಎಷ್ಟಾದರೂ ನಾವು ಅವರ ಪೂರ್ವಜರಲ್ಲವೇ ?. ಹೀಗೆ ಹೋಳುತ್ತಾ ಮನಸ್ಸಿನಲ್ಲಿಯೇ ಮಾನವನಿಗೆ ಈ ಸವಾಲನ್ನು ಹಾಕುವ ಮಂಗಗಳಿಗೂ ಕೊರತೆ ಇಲ್ಲ. ಹೀಗೆ ಸವಾಲು ಹಾಕಿದ ಮಂಗ ಈ ತಂಪು ಪಾನೀಯದ ರುಚಿಯನ್ನು ಆಸ್ವಾದಿಸುವ ಪರಿ ನೋಡಿ. ಇದನ್ನು ಕೊಳ್ಳಲು ಹಣವನ್ನು ಮಂಗಕ್ಕೆ ಕೊಟ್ಟವರು ಯಾರು ?. ಅಂಗಡಿಗೆ ಹೋಗಿ ವ್ಯಾಪಾರ ಮಾಡುವ ಕಲೆಯನ್ನು ಯಾರು ಕಲಿಸಿದರು ?. ಈ ವಿಧದ ಪ್ರಶ್ನೆಗಳು ನಿಮ್ಮನ್ನು ಕಾಡಬಹುದು. ಅತಿಯಾಗಿ ಚಿಂತಿಸಬೇಡಿ. ಮಂಗ ಹಣವನ್ನು ತೆತ್ತು ತಂದ ಪಾನೀಯ ಇದಲ್ಲ. ಇದು ನಿಮ್ಮಂತಹ ಯಾತ್ರಿಕರ ಗಮನ ಬೇರೆಡೆ ಹೋದಾಗ, ನಿಮ್ಮ ಕಣ್ಣು ತಪ್ಪಿಸಿ ಸಂಗ್ರಹಿಸಿದ ತಂಪು ಪಾನೀಯ. ಅಂತೂ ಮಂಗನಿಗೂ ಇದನ್ನು ಕುಡಿಯುವ ಬಯಕೆ. ಬೇಸಿಗೆ ಉರಿ ಯಾರನ್ನೂ ಬಿಡದು.
ಬರಹ : ಡಾ.ಶ್ರೀಕಾಂತ್ಸಿದ್ದಾಪುರ
ಚಿತ್ರ: ವಿದ್ಯಾರಣ್ಯ
ಬರಹ : ಡಾ.ಶ್ರೀಕಾಂತ್ಸಿದ್ದಾಪುರ
ಚಿತ್ರ: ವಿದ್ಯಾರಣ್ಯ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ