Argodu is a small village in Kundapura Taluk. Famous yakshagana artist Govindraya Shenoy, Mohanadas Shenoy are native of this village. On the eve of Ganesha chaturthi yakshagana artist Mahabala Devadiga was felicitated in Argodu Srikanth Shenoy's house. Dr.Srikanth siddapura, Vittobha Shenoy & Gopinath Kamath were guests
ನನ್ನ ಕಾರ್ಯಕ್ರಮ ಹಾಗೂ ಕನ್ನಡದ ಬಗ್ಗೆ ಈ ಬ್ಲಾಗನ್ನು ರಚಿಸಲಾಗಿದೆ. ಕಾಳಿಂಗ ನಾವಡರು ನನ್ನ ಸ್ನೇಹಿತರು. ಪ್ರಸಿದ್ಧ ಭಾಗವತರು. ಅವರ ಭಾವಚಿತ್ರವನ್ನು ಇಲ್ಲಿ ಹಾಕಲಾಗಿದೆ.
ಭಾನುವಾರ, ಡಿಸೆಂಬರ್ 2, 2012
ಮಂಗಳವಾರ, ನವೆಂಬರ್ 20, 2012
ಪುಸ್ತಕ ಬಿಡುಗಡೆ ಸಮಾರಂಭ
ಕೇದಾರ ಮತ್ತು ಓಶೋ ಹೇಳಿದ ದೃಷ್ಟಾಂತ ಕಥೆಗಳು-ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ, ಶ್ರೀ ಎ.ಜಿ.ಕೊಡ್ಗಿ, ಸುಬ್ರಹ್ಮಣ್ಯ ಜೋಷಿ, ಸಂಪಿಗೇಡಿ ಸಂಜೀವ ಶೆಟ್ಟಿ, ಮುನಿಯಾಲು ಗಣೇಶ ಶೆಣೈ ಹಾಗೂ ಲೇಖಕ ಡಾ.ಶ್ರೀಕಾಂತ್ ಸಿದ್ದಾಪುರ. 18-11-2012 ಭಾನುವಾರ ಸಿದ್ದಾಪುರದ ಅನಂತಪದ್ಮನಾಭ ಸಭಾಗೃಹದಲ್ಲಿ ಕಾರ್ಯಕ್ರಮ ನಡೆಯಿತು. ರಾಜಣ್ಣ ರಾವ್ ಸ್ವಾಗತಿಸಿದರು. ಮಂಜುನಾಥ ಕರಬ ಕಾರ್ಯಕ್ರಮ ನಿರೂಪಿಸಿದರು. ಕೆ.ಬೋಜ ಶೆಟ್ಟಿ ವಂದಿಸಿದರು. ಡಾ.ರಮೇಶ್ ರಾವ್ ಸಭಿಕರ ಪರವಾಗಿ ಮಾತನಾಡಿದರು. ಶ್ರೀಮತಿ ಸುಜಾತಾ ಆರ್ ರಾವ್ ಪ್ರಾರ್ಥಿಸಿದರು.
ಕೇದಾರದ ಮುಖಪುಟ ಚಿತ್ರ: ಆಸ್ಟ್ರೋ ಮೋಹನ್ ಮತ್ತು ಜನಾರ್ದನ ಕೊಡವೂರುಭಾನುವಾರ, ನವೆಂಬರ್ 4, 2012
ಶನಿವಾರ, ನವೆಂಬರ್ 3, 2012
ಗುರುವಾರ, ಅಕ್ಟೋಬರ್ 18, 2012
YOGA TEACHER B.S. SHASTRI
Sri B.S. Shastri's full name is B.Shankara Shastri. He is native of Shankaranarayana, kundapura Taluk, Udupi District. He started his career as a high school teacher. He was honoured with National Award for his contribution to teaching field. He served several years as a head master in Govt. High School, Amavasebail. He retired as a Education Officer. Now he is a yoga instructor. He conducts free yoga classes throughout Karnataka. He is very simple man living in real Indian Style.
ಶನಿವಾರ, ಅಕ್ಟೋಬರ್ 13, 2012
ಶುಕ್ರವಾರ, ಅಕ್ಟೋಬರ್ 12, 2012
ಬುಧವಾರ, ಅಕ್ಟೋಬರ್ 10, 2012
ಸೋಮವಾರ, ಅಕ್ಟೋಬರ್ 8, 2012
ಭಾನುವಾರ, ಸೆಪ್ಟೆಂಬರ್ 30, 2012
Osho & meditation
ಓಶೋ ಮತ್ತು ಧ್ಯಾನ
ಓಶೋರವರ ಪ್ರವಚನಗಳಲ್ಲಿ ಧ್ಯಾನಕ್ಕೆ ವಿಶಿಷ್ಟ ಸ್ಥಾನ. ಅವರ ದೃಷ್ಟಿಯಲ್ಲಿ ಧ್ಯಾನವು ಮನುಷ್ಯ ಮತ್ತು ಪ್ರಕೃತಿಯೊಂದಿಗೆ ನಮ್ಮ ಸೌಹಾರ್ದ ಸಂಬಂಧವನ್ನು ವೃದ್ಧಿಸುವ ಸಾಧನ. ಧ್ಯಾನಕ್ಕೆ ಮತೀಯವಾದ ಸೀಮೆ ಇಲ್ಲ. ಯಾವ ಮತದವರೂ ಇದನ್ನು ಅಭ್ಯಸಿಸಬಹುದು. ಓಶೋರವರು ಪ್ರತಿಪಾದಿಸುವ ಧ್ಯಾನ ತಂತ್ರವು ಬುದ್ಧ ಮತ್ತು ಜಪಾನಿನ ಝೆನ್ ಗುರುಗಳಿಂದ ಪ್ರಭಾವಿತವಾಗಿದೆ. ಮನಸ್ಸಿನ ನಿರ್ವಾಣವೇ ಧ್ಯಾನ. ಮನಸ್ಸಿನ ಬೆತ್ತಲೆಯೇ ಧ್ಯಾನ. ಮನಸ್ಸನ್ನು ಪ್ರಾಪಂಚಿಕ ವಿಚಾರಗಳಿಂದ ಮುಕ್ತಗೊಳಿಸುವುದೇ ಧ್ಯಾನ. ಓಶೋರವರು ಧ್ಯಾನದ ವೇಳೆ ಮನಸ್ಸನ್ನು ನಿಶ್ಚಿತ ವಸ್ತು, ವಿಚಾರ, ಧರ್ಮ ಅಥವಾ ದೇವರ ಚಿಹ್ನೆಗಳ ಮೇಲೆ ಕೇಂದ್ರೀಕರಿಸಬೇಕೆಂಬುದನ್ನು ಸಮರ್ಥಿಸುವುದಿಲ್ಲ. ಮನಸ್ಸಿನ ಓಡಾಟಗಳನ್ನು ಸಾಕ್ಷೀಭಾವದಿಂದ ಗಮನಿಸುವುದಕ್ಕೇ ಇಲ್ಲಿ ಮಹತ್ತ್ವ. ಆ ಮೂಲಕ ಎಚ್ಚರಪ್ರಜ್ಞೆಯ ಬೆಳವಣಿಗೆ. ಮನಸ್ಸು ಎಲ್ಲಾ ಕಾಮನೆಗಳಿಂದ ಬಿಡುಗಡೆಯಾದಾಗಲೇ ಆನಂದ. ಅದೇ ಧ್ಯಾನ. ಧ್ಯಾನದ ಕುರಿತ ಅವರ ಅಭಿಪ್ರಾಯಗಳನ್ನು ಸ್ಪಷ್ಟಪಡಿಸಲು ಹಲವು ದೃಷ್ಟಾಂತ ಕತೆಗಳನ್ನು ಪ್ರವಚಗಳ ಉದ್ದಕ್ಕೂ ನೀಡಿರುತ್ತಾರೆ.
ಪ್ರತಿಫಲಾಪೇಕ್ಷೆಗಳ ಸಂಪೂರ್ಣ ವಿಸರ್ಜನೆಯೇ ಧ್ಯಾನ:
ನಾನು ಯಾರು? ಎಂಬುದನ್ನು ಅರಿಯುವ ಉತ್ಕಟಾಕಾಂಕ್ಷೆ ಒಬ್ಬನಿಗೆ ಆಯಿತು. ಧ್ಯಾನದಿಂದ ಇದು ಸಾಧ್ಯ ಎಂಬ ನಂಬಿಕೆ ಆತನಲ್ಲಿ ಬೆಳೆಯಿತು. ಅದಕ್ಕಾಗಿ ಸದ್ಗುರುಗಳನ್ನು ಅರಸುತ್ತಾ ಸಾಗಿದನು. ಹೀಗೆ ಹಲವು ವರ್ಷಗಳೇ ಕಳೆದವು. ಆತನಿಗೆ ಏನೂ ಅನುಭವವಾಗಲೇ ಇಲ್ಲ. ಆತನಿಗೆ ಯಾರೋ ಹೇಳಿದರು. ಹಿಮಾಲಯಕ್ಕೆ ಹೋಗು. ಅಲ್ಲಿ ಧ್ಯಾನವನ್ನು ಕಲಿಸುವ ಓರ್ವ ಗುರು ಇದ್ದಾರೆ. ಆದರೆ ಅವರನ್ನು ಸಂಪಕಿಸುವುದು ಕಷ್ಟಸಾಧ್ಯದ ವಿಚಾರ. ಯಾರಾದರೂ ಬರುತ್ತಾರೆ ಎಂದು ತಿಳಿದ ತತ್ಕ್ಷಣ ಸ್ಥಳ ಬದಲಾಯಿಸುತ್ತಾರಂತೆ. ಆತನಿಗೆ ಈ ಹುಡುಕಾಟದಿಂದ ವಯಸ್ಸು ಬೇರೆ ಆಗಿತ್ತು. ಆದರೂ ಹಂಬಲ ಕಡಿಮೆಯಾಗಲಿಲ್ಲ. ಹಿಮಾಲಯಕ್ಕೆ ಹೋಗಿ ಆ ಗುರುವನ್ನು ಹುಡುಕಿ ಧ್ಯಾನವನ್ನು ಕಲಿಯಲೇ ಬೇಕೆಂಬ ಹಠ ಬಲವಾಯಿತು. ಬಹಳ ಕಷ್ಟಪಟ್ಟು ಹಿಮಾಲಯದ ತಪ್ಪಲನ್ನು ತಲುಪಿದನು. ಅಲ್ಲೆಲ್ಲಾ ಗುರುವಿಗಾಗಿ ಹಗಲೂ ರಾತ್ರಿ ಹುಡುಕಾಡಿದನು. ಅವರು ಸಿಗಲೇ ಇಲ್ಲ. ಅಲ್ಲಿದ್ದ ಕೆಲವರನ್ನು ವಿಚಾರಿಸಿದನು. ಅವರು ಹೇಳಿದರು. ಇಲ್ಲಿ ಅಂತಹ ಯೋಗಿ ಇರುವುದು ಸತ್ಯ. ಅವರಿಗೆ 400 ರಿಂದ 500 ವರ್ಷ ವಯಸ್ಸಾಗಿದೆ ಎಂದೂ ಕೇಳಿದ್ದೇವೆ. ಆದರೆ ಯಾರ ಕಣ್ಣಿಗೂ ಬೀಳುತ್ತಿಲ್ಲ. ಬೇಕಾದರೆ ಇನ್ನಷ್ಟು ಹುಡುಕು. ಸಿಕ್ಕಿದರೂ ಸಿಕ್ಕಬಹುದು. ಹಾಗೇನಾದರೂ ಸಿಕ್ಕಿದರೆ ನಿನ್ನ ಪುಣ್ಯ. ಹುಡುಕಾಟವನ್ನು ಮತ್ತೂ ಚುರುಕುಗೊಳಿಸಿದನು. ಸುತ್ತಿ ಸುತ್ತಿ ಸುಸ್ತಾಗಿದ್ದನು. ಅಲ್ಲಿನ ಎಲೆ, ಹಣ್ಣುಗಳನ್ನೇ ತಿಂದು ಜೀವಿಸಿದನು. ಜೀವ ಹೋದರೂ ಸರಿಯೇ, ಧ್ಯಾನವನ್ನು ಕಲಿತೇ ಮರಳುವುದು ಎಂಬ ನಿಧರ್ಾರ ಮತ್ತಷ್ಟು ಆತನಲ್ಲಿ ದೃಢವಾಯಿತು. ಕೊನೆ ಕೊನೆಗೆ ನಡೆಯಲೂ ಆಗದ ಹಂತಕ್ಕೆ ತಲುಪಿದನು. ಹೀಗೆ ಹುಡುಕಾಟದ ನಡುವೆ ಆತನಿಗೊಂದು ಹಳೆಯ ಗುಡಿಸಲು ಕಾಣಿಸಿತು. ಅದರೊಳಗೆ ಪ್ರವೇಶಿದನು. ಅಲ್ಲಿ ಯಾರೂ ಇಲ್ಲ. ಬಾಗಿಲುಗಳೂ ಇಲ್ಲ. ಆಯಾಸದಿಂದ ಗುಡಿಸಲಿನ ನೆಲದ ಮೇಲೆ ದೊಪ್ಪನೆ ಬಿದ್ದನು. ಇನ್ನು ನನ್ನಿಂದ ಏನೂ ಆಗುವುದಿಲ್ಲ. ಇಲ್ಲಿಗೆ ನನ್ನ ಕತೆ ಮುಗಿಯಿತು ಎಂದು ಉದ್ಗರಿಸಿದನು. ಹೀಗೆ ಮಲಗಿದ್ದ ಆತನ ಮೇಲೆ ಹಿಮಾಲಯದ ತಂಪಾದ ಗಾಳಿ ಬೀಸಿತು. ಏನೋ ಅವ್ಯಕ್ತವಾದ ಆನಂದಾನುಭವ ಇದ್ದಕ್ಕಿದ್ದಂತೆ ಆತನಲ್ಲಿ ಮೂಡಿತು. ಕಣ್ಣುಗಳನ್ನು ತೆರೆದನು. ಯಾರೋ ಅವನ ಎದೆಯ ಮೇಲೆ ಕುಳಿತು ಗಹಗಹಿಸಿ ನಗುತ್ತಿದ್ದಾರೆ. ಹೀಗೆ ನಗುತ್ತಿರುವಾತ ಹಣ್ಣು ಹಣ್ಣು ಮುದುಕ. ಕೊನೆಗೂ ಬಂದೆಯಲ್ಲವೇ?. ಇನ್ನು ಏನಾದರೂ ಕೇಳಬೇಕೇ?. ಎದೆಯ ಮೇಲೆ ಕುಳಿತಿದ್ದ ಮುದುಕ ಕೇಳಿದ. ಆತ ಏನೂ ಇಲ್ಲ ಎಂದ. ಧ್ಯಾನ ಎಂದರೇನೆಂದು ಈಗ ತಿಳಿಯಿತೇ?. ಆ ಹಣ್ಣು ಹಣ್ಣು ಮುದುಕ ಮತ್ತೆ ಕೇಳಿದ. ಆತ ಉತ್ತರಿಸಿದ. ಹೌದು.
ಧ್ಯಾನವನ್ನು ಕಲಿಯಲು ಗುರುಗಳನ್ನು ಹುಡುಕುತ್ತಾ ಹೊರಟ ಆತನಿಗೆ ಈ ಹಂತದಲ್ಲಿ ಆಕಾಂಕ್ಷೆ, ಹಠ,ಸಾಧನೆ ಎಲ್ಲವೂ ಶೂನ್ಯವಾಗಿತ್ತು. ನನ್ನಿಂದ ಏನೂ ಮಾಡಲಾಗದು ಎಂದು ತೀಮರ್ಾನಕ್ಕೆ ಬಂದ ತತ್ಕ್ಷಣ ಮನಸ್ಸು ಬಯಕೆಗಳಿಂದ ಬರಿದಾಗಿತ್ತು. ನನ್ನ ಕತೆ ಮುಗಿಯಿತು, ನನ್ನಿಂದ ಏನೂ ಆಗುವುದಿಲ್ಲ ಎಂಬ ಘೋಷಣೆಯು ಆತನ ಸ್ವಯಂನಾಳದಿಂದ ಹೊರಹೊಮ್ಮಿತ್ತು. ಈ ಸಂದರ್ಭದಲ್ಲಿಯೇ ಆನಂದದ ಅಮೃತಧಾರೆ ಆತನ ಮೇಲೆ ಎರಗಿತ್ತು. ಆತ ಅತ್ಯಂತ ಮೌನಿಯಾಗಿದ್ದನು. ಮನಸ್ಸು ಎಲ್ಲಾ ಪ್ರತಿಫಲಾಪೇಕ್ಷೆಗಳಿಂದ ಮುಕ್ತವಾಗುವುದೇ ಧ್ಯಾನ ಎಂದು ಓಶೋ ಈ ಕತೆಯ ಮೂಲಕ ಪ್ರತಿಪಾದಿಸುತ್ತಾರೆ.
ವ್ಯರ್ಥ ಧ್ಯಾನ:
ಒಮ್ಮೆ ಮೂವರು ಧ್ಯಾನದತ್ತ ಮುಖ ಮಾಡಿದರು. ಹೀಗೆ ಧ್ಯಾನಕ್ಕೆ ಕುಳಿತಾಗಲೇ ರಾಜಕುಮಾರನೊಬ್ಬ ಕುದುರೆಯ ಮೇಲೇರಿ ಅದೇ ಮಾರ್ಗದಲ್ಲಿ ಸಾಗಿದನು. ಅವರ ಧ್ಯಾನ ಒಂದು ವರ್ಷ ಕಳೆದಿತ್ತು. ಮೂವರಲ್ಲಿ ಒಬ್ಬ ಹೇಳಿದನು. ಆ ರಾಜಕುಮಾರನೇರಿದ ಕುದುರೆಯ ಬಣ್ಣ ಕಪ್ಪು. ಧ್ಯಾನವು ಎರಡು ವರ್ಷ ದಾಟಿತು. ಇನ್ನೋರ್ವ ಹೇಳಿದನು. ನೀನು ಹೇಳಿದುದು ತಪ್ಪು. ಅದರ ಬಣ್ಣ ಬಿಳಿ. ಎರಡೂ ವರ್ಷಗಳು ದಾಟಿ ಮೂರನೇ ವರ್ಷಕ್ಕೆ ಅವರ ಧ್ಯಾನ ಕಾಲಿಟ್ಟಿತು. ಮತ್ತೊಬ್ಬ ಹೇಳಿದನು. ನೀವು ಹೀಗೇ ವಾದ ಮಾಡುತ್ತಿದ್ದರೆ ನಾನು ಇಲ್ಲಿ ಕುಳಿತುಕೊಳ್ಳುವುದಿಲ್ಲ. ಬೇರೆಡೆಗೆ ಹೋಗುತ್ತೇನೆ.
ಈ ಮೂವರು ಮೂರು ವರ್ಷಗಳ ಕಾಲವೂ ಕುದುರೆಯ ಬಣ್ಣದಂತಹ ಕ್ಷುಲ್ಲಕ ವಿಚಾರಗಳತ್ತಲೇ ತಲೆಕೆಡಿಕೊಂಡರು. ಇಂತಹ ಧ್ಯಾನವು ಧ್ಯಾನವೇ ಅಲ್ಲ ಎಂದು ಓಶೋ ತಿಳಿಸುತ್ತಾರೆ.
ಧ್ಯಾನಿ ಪ್ರತಿಕ್ರಿಯಿಸಬಾರದು :
ಒಬ್ಬ ಮಾರ್ವಾಡಿಯ ಮನೆಯ ಮುಂದೆ ಭಿಕ್ಷುಕ ಬಂದನು. ಅಯ್ಯಾ ಏನದರೂ ಕೊಡಿ. ಒಂದು ರೊಟ್ಟಿಯನ್ನಾದರೂ ಕೊಡಿ. ತುಂಬಾ ಹಸಿವಾಗಿದೆ. ಮಾರ್ವಾಡಿ ಉತ್ತರಿಸಿದನು. ರೊಟ್ಟಿಯೇ? ಏನೂ ಇಲ್ಲ. ಮತ್ತೆ ಭಿಕ್ಷುಕ ಗೋಗರೆದ. ನಾಲ್ಕಾಣೆಯಾದರೂ ಕೊಡಿ ಸ್ವಾಮಿ. ಮಾರ್ವಾಡಿ ಉತ್ತರಿಸಿದನು. ಒಂದು ಪೈಸೆಯೂ ಇಲ್ಲ. ಪುನ: ಭಿಕ್ಷುಕ ಬೇಡಿದ. ಒಂದು ಹಳೆಯ ಅರಿವೆ ತುಂಡೂ ಇಲ್ಲವೇ?. ಅದನ್ನಾದರೂ ನೀಡಿ. ಮಾರ್ವಾಡಿಗೆ ಎಲ್ಲಿಲ್ಲದ ಕೋಪ ಬಂದಿತು. ನಿನಗೆ ಹೇಳಿದ್ದು ಕೇಳಿಸುವುದಿಲ್ಲವೇ?. ಏನೂ ಇಲ್ಲ. ಮುಂದೆ ಹೋಗು. ಭಿಕ್ಷುಕ ಈಗ ಉತ್ತರಿಸಿದನು. ಹಾಗಾದರೆ ಅಲ್ಲಿ ಯಾಕೆ ಕುಳಿತಿರುವೆ. ನನ್ನೊಂದಿಗೆ ಬಂದು ಬಿಡಬಹುದಲ್ಲವೇ?.
ಧ್ಯಾನದ ವೇಳೆ ಮನಸ್ಸು ಶೂನ್ಯವಾಗುತ್ತಾ ಹೋಗಬೇಕು. ವಿವಿಧ ಬಯಕೆಗಳು ಮನಸ್ಸಿನ ಸ್ವಭಾವ. ಅದಕ್ಕೆ ಪ್ರತಿಕ್ರಿಯಿಸುತ್ತಾ ಕುಳಿತಲ್ಲಿ ಧ್ಯಾನ ದೂರ. ಭಿಕ್ಷುಕನ ಮಾತಿಗೆ ಪ್ರತಿಕ್ರಿಯಿಸುತ್ತಾ ಹೋದುದರಿಂದಲೇ ಮಾವರ್ಾಡಿ ಪೇಚಾಟಕ್ಕೆ ಸಿಲುಕಿ ಕೊಂಡನು. ಆತ ಸುಮ್ಮನಿದ್ದಿದ್ದರೆ ಭಿಕ್ಷುಕ ಕೆಲವು ಸಲ ಕೂಗಿ ಸುಮ್ಮನೆ ಮುಂದೆ ಸಾಗುತ್ತಿದ್ದನು.
ಧ್ಯಾನ ಮತ್ತು ಆ ಮೂಲಕ ಮಾನಸಿಕ ನೆಮ್ಮದಿ ಇಂದು ಬಹುಜನರ ಬೇಡಿಕೆ. ಆದರೆ ಮನಸ್ಸಿನ ಚಂಚಲ ಸ್ವಭಾವಗಳನ್ನು ಪಳಗಿಸುವುದು ಸುಲಭವೇ?. ಮನಸ್ಸಿನ ನಿಯಂತ್ರಣಕ್ಕೆ ಹೆಣಗಾಡಿದ ನಮ್ಮ ಹಿಂದಿನ ಸಾಧಕರು ಕೊನೆಗೂ ಮನಸ್ಸನ್ನು ನಿನ್ನತ್ತ ಕೊಂಡು ಹೋಗುವಂತೆ ನೀನೇ ಸಹಕರಿಸು ಎಂದು ಭಗವಂತನಲ್ಲಿ ದೀನರಾಗಿ ಬೇಡಿದರು. ಧ್ಯಾನದ ನೈಜ ಮಾರ್ಗ ಸರಳವೇ?.
ಡಾ.ಶ್ರೀಕಾಂತ್ ಸಿದ್ದಾಪುರ

Minor Research project on Osho's parables in Kannada Books-Summery of the project
A
STUDY ON OSHO’S PARABLES IN KANNADA TRANSLATED BOOKS
Osho (11 December 1931 – 19 January, 1990), born
Chandramohan Jain, in Kuchwada village
in Madhya Pradesh and also known as Acharya Rajneesh from the 1960s
onwards, as Bhagwan Shree Rajneesh during the 1970s and 1980s and as Osho from 1989, was an Indian mystic,
guru, and spiritual teacher who garnered an international following. Osho is a
contracted form of ‘ocean’ and to his followers, Rajneesh was verily an ocean
of knowledge.
A
professor of Philosophy, Osho travelled worldwide; gave hundreds of discourses.
His discourses have already been published in book forms. It is estimated that around 650 books have
been published. The books are mainly in
English and Hindi languages. Among
these, some important titles have been translated into around
30 other languages all of which have become immensely popular. These translations are available in Kannada
also and their number is estimated to be 30.
Osho’s teachings, delivered through his discourses, were
not presented in an academic setting, but were interspersed with jokes and
delivered with a rhetoric that many found spellbinding. The emphasis was not static but changed over
time. Osho revelled in paradox and
contradiction, making his work difficult to summarize. He delighted in engaging in behavior that
seemed entirely at odds with traditional images of enlightened individuals; his
early lectures in particular were famous for their humour and their refusal to
take anything seriously. All such behavior,
however capricious and difficult to accept, was explained as “a technique for
transformation” to push people “beyond the mind.”
The key attraction of Osho’s discourses is beautifully narrated
parables. The main purpose of this
technique is to help common people understand ideas enshrined in books on
philosophy and theology that are otherwise unintelligible to them. One can find many parables of this kind in
Osho’s works. Osho had this to say about
parables: As the navel shows something about the past, a parable shows
something about the future. It shows
that there is a possibility of growing, of being connected with existence. Right now that is only a possibility, it is not
actual. If you just dissect the parable it becomes an ordinary story. If you
don’t dissect it but just drink the meaning of it, the poetry of it, the music
of it – forget the story and just carry the significance of it – soon you will
see that it indicates towards a future, towards something which can be but is
not yet. It is transcendental. A theory can be dissected – its meaning is in
it, it has no transcendence, the meaning is immanent. A parable cannot be dissected; dissect, and
it will die. The meaning is
transcendental; it is not in it, it is
somewhere else – it has to be, you
have to live a parable, then you will come to its meaning. It has to become your heart, your breathing;
it has to become your inner rhythm. So
these parables are tremendously artistic but not mere art: great religion is
contained in them.
The
main topic selected for the present research work is Parables in the works of
Osho that have been translated into Kannada.
About 116 parables narrated by Osho that are found in his
Kannada-translated works are taken up for study in this research report.
Uniqueness
of Osho’s Parables
Osho
has strived to put across his thoughts to the common people through these
parables. In Osho’s parables there are
thoughts culled from Upanishads, Mahabharata, Ramayana and the Bhagavad
Gita. Some instances from these sources
are quoted as illustrations. Events
associated with the lives of saints and sages of India have also been made the subject
of Osho’s parables. Besides Bhagawn
Buddha, Mahavira, great sages of the Himalayas, and Sri Ramakrishna
Paramahamsa, wonderful events in the lives of fakirs and saints whose
contributions to the enrichment of Indian spirituality deserve acknowledgement
find place in his works. The courageous
events associated with naked sages like Dandani and Diogenes attract attention
of the readers.
Osho
was not inspired by Indian thought only.
He studied the biographies of many Western thinkers. Extensive reading was his forte. Mohammed Pygambar, Jesus Christ, Einstein,
Thomas Alva Edison, Mao-Tse-Tung, George Gurdjieff, Confucius, Albert Camus,
Sufi saints, Zen teachers – thoughts of all these accomplishers are there in
Osho’s works.
One
special feature of Osho’s parables is that these contain extensive debate on
education, psychology, music, ayurveda, yoga, science, meditation, nature, environment
etc., and the analysis of desirability
or otherwise of these subjects in the background of scientific outlook.
Though
Osho made an in-depth study of both Indian and Western philosophies, he did not
accept either of these blindly. He denounced all kinds of superstitions and
his radical ideas ran counter to traditional beliefs and naturally incurred the
wrath of the orthodox people. So he had
both followers and detractors in almost equal number. Especially, his
unorthodox views on sex created a storm and made him a villain in the eyes of
many religious heads. He spoke publicly
about many subjects that were prone to be suppressed in the name of orthodoxy. One of
these subjects is sex which was almost a proscribed subject for children. He advocated a more open attitude towards
sexuality which included dissemination of sex-related matters to children. In
his discourses, Osho reinterpreted writings of religious traditions, mystics,
and philosophers from around the world
His teachings emphasize the importance of meditation, awareness, love,
celebration, courage, creativity and humor – qualities that he viewed as being
suppressed by adherence to static belief systems, religious tradition and
socialization.
Chapters in the Research Report:
The
Research Report is divided into the following chapters:
1. Parables:
origin and development.
2. Special
features of Osho’s parables
3. Stories
concerning lives of achievers in the spiritual path
4. Didactic
stories
5. Humorous
stories.
In
Osho’s didactic stories values occupy the central position. There are about 73
stories of this nature. These values are
subjected to analysis and discussion regarding their relevance today. Osho’s
thoughts can be identified in these parables.
·
God is not a person, but a force
·
Experiencing every minute of the present
should be our goal
·
Education is not just a collection of information
·
Projecting sexuality as immoral or
obscene is not a healthy sign
·
Nothing should be suppressed,
suppression leads to unrest
·
Meditation is a science which is beyond
religious boundaries. Meditation improves human relations.
·
Enforced detachment is temporal.
Benefits
of the Research Project:
·
Hundreds of parables are scattered over Osho’s works. An attempt is made here to put them together
in a single paper.
·
We are not acquainted with many unknown spiritual achievers of our ancient
culture. Osho has narrated in his
parables many events associated with the lives of these achievers which should
help us know about them.
·
Osho
reveals in his discourses information regarding many books which are generally
not available to common readers. In his discourses he includes lines and
parables from these books which he liked.
·
He explains through parables values
embedded in Indian and Western thoughts.
There are explanations about the relevance and degeneration of these
values. These stories will be like beacon
for us in personality development. The
study of these parables acquaints us with different thought streams of Western thinkers.
·
Especially,
the stories make even common people happy.
They will be resource subjects for students and orators.
·
Through these parables one can have a peep
into Osho’s thoughts.
ಶನಿವಾರ, ಸೆಪ್ಟೆಂಬರ್ 29, 2012
OSCAR FERNANDES
ಸರಳ ಮತ್ತು ಸಜ್ಜನಿಕೆಯ ರಾಜಕಾರಣಿ ಓಸ್ಕರ್ ಫೆರ್ನಾಂಡಿಸ್
ಕೇಂದ್ರದಲ್ಲಿ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡವರು ಉಡುಪಿಯ ಓಸ್ಕರ್ ಫೆರ್ನಾಂಡಿಸ್. ಶ್ರೀಮತಿ ಇಂದಿರಾ ಗಾಂಧಿ, ರಾಜೀವ್ ಗಾಂಧಿಯವರ ನಂಬಿಕೆಯ ನಾಯಕರಾಗಿದ್ದ ಓಸ್ಕರ್, ತಮ್ಮ ಪ್ರಾಮಾಣಿಕತೆ ಹಾಗೂ ಪಕ್ಷ ನಿಷ್ಠೆಯಿಂದಾಗಿ ಇದೀಗ ಸೋನಿಯಾ ಗಾಂಧಿಯವರ ವಿಶ್ವಾಸಕ್ಕೂ ಪಾತ್ರರಾಗಿರುತ್ತಾರೆ. ಶ್ರೀಸಾಮಾನ್ಯನ ಪಾಲಿಗೆ ನೆಚ್ಚಿನ ಓಸ್ಕರಣ್ಣ.
ಓಸ್ಕರರ ಹಿರಿಯರು:
ಓಸ್ಕರ್ ಫೆರ್ನಾಂಡಿಸರು 1941 ಮಾರ್ಚ್ 27 ರಂದು ಉಡುಪಿಯಲ್ಲಿ ಜನಿಸಿದರು. ತಂದೆ ಖ್ಯಾತ ಮುಖ್ಯೋಪಾಧ್ಯಾಯರಾಗಿದ್ದ ರೋಕ್ ಫೆರ್ನಾಂಡಿಸ್, ತಾಯಿ ಲಿಯೊನಿಸ್ಸಾ ಫೆರ್ನಾಂಡಿಸ್. ರೋಕ್ ಫೆರ್ನಾಂಡಿಸ್, ಉಡುಪಿಯ ಅಂದಿನ ಪ್ರಸಿದ್ಧ ಇಂಗ್ಲೀಷ್ ಅಧ್ಯಾಪಕರು. ಇಂಗ್ಲೀಷ್ ಭಾಷೆಯಲ್ಲಿ ಆಳವಾದ ಪಾಂಡಿತ್ಯ ಹೊಂದಿದವರು. ದೇಶ ಭಕ್ತರಾಗಿದ್ದ ಇವರು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿ ಸ್ವಾತಂತ್ರ್ಯದ ಪರವಾಗಿ ಜನತೆಯಲ್ಲಿ ಹುರಿದುಂಬಿಸಿದವರು. ಸರ್ವಧರ್ಮ ಸಮಭಾವವನ್ನು ಅಳವಡಿಸಿಕೊಂಡಿದ್ದ ರೋಕ್ ಫೆರ್ನಾಂಡಿಸ್ ಉಡುಪಿಯ ಹಾಜಿ ಅಬ್ದುಲ್ಲರಂತೆ ಎಲ್ಲಾ ಮತದವರ ಪ್ರೀತಿಗೂ ಪಾತ್ರರಾಗಿದ್ದವರು. ತನ್ನ ವಿದ್ಯಾರ್ಥಿಗಳನ್ನು ಮಗೂ ಎಂದೇ ಸಂಬೋಧಿಸುತ್ತಿದ್ದ ರೋಕಿ ಮಾಷ್ಟ್ರು ವಿದ್ಯಾರ್ಥಿಗಳ ನೆಚ್ಚಿನ ಅಧ್ಯಾಪಕರು. ತಾಯಿ ಲಿಯೋನಿಸ್ಸಾ ಫೆರ್ನಾಂಡಿಸ್ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಮಹಿಳಾ ಬೆಂಚ್ ಮ್ಯಾಜಿಸ್ಟ್ರೇಟ್ ಆಗಿ ಸೇವೆ ಸಲ್ಲಿಸಿದವರು. ಉಡುಪಿ ನಗರಸಭೆಯ ಸದಸ್ಯರೂ ಆಗಿದ್ದ ಇವರ ಕಾರ್ಯತತ್ಪರತೆಯನ್ನು ಲಾಲಾಲಜಪತ್ ರಾಯ್ ಅವರೂ ಕೊಂಡಾಡಿದ್ದಾರೆ. 1927 ರಲ್ಲಿ ಲಜಪತ್ರಾಯ್ ಬರೆದ Unhappy India ಕೃತಿಯಲ್ಲಿ ಲೊಯೋನಿಸ್ಸಾರನ್ನು ವಿಶೇಷವಾಗಿ ಪ್ರಶಂಸಿಸಿದ್ದಾರೆ. ಭಾರತೀಯ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಟೀಕಿಸಿ ಬ್ರಿಟಿಷ್ ಪತ್ರಕರ್ತೆ ಬರೆದ ಪುಸ್ತಕಕ್ಕೆ ಪ್ರತಿಯಾಗಿ ಲಜಪತ್ರಾಯ್ ಈ ಪುಸ್ತಕವನ್ನು ಬರೆದಿದ್ದರು. ಭಾರತೀಯರ ಆತ್ಮಾಭಿಮಾನವನ್ನು ಬಡಿದೆಬ್ಬಿಸಬಹುದೆಂಬ ಭೀತಿಯಿಂದ ಈ ಪುಸ್ತಕವನ್ನು ಬ್ರಿಟಿಷ್ ಸರಕಾರ ಕೂಡಲೇ ನಿಷೇಧಿಸಿತ್ತು. ಈ ದಂಪತಿಗಳ ಹನ್ನೆರಡು ಮಂದಿ ಮಕ್ಕಳಲ್ಲಿ ಒರ್ವರು ಓಸ್ಕರ್ ಫೆರ್ನಾಂಡಿಸ್
ಓಸ್ಕರರ ಬಾಲ್ಯದ ದಿನಗಳು:
ಓಸ್ಕರ್ ಫೆರ್ನಾಂಡಿಸ್ ಇವರ ಪ್ರೌಢಶಿಕ್ಷಣವು ಉಡುಪಿಯ ಬೋರ್ಡ್ ಹೈಸ್ಕೂಲಿನಲ್ಲಿ ನಡೆಯಿತು. ಬಳಿಕ ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಕಾಲೇಜು ವ್ಯಾಸಂಗವನ್ನು ಮುಂದುವರಿಸಿದರು. ಓಸ್ಕರರಿಗೆ ಎಳವೆಯಿಂದಲೂ ಕೃಷಿಯಲ್ಲಿ ಅಪಾರ ಆಸಕ್ತಿ. ಕೃಷಿ ಕಾಯಕಗಳಲ್ಲಿ ಸ್ವತ: ತಮ್ಮನ್ನು ತೊಡಗಿಸಿಕೊಂಡ ಓಸ್ಕರ್, ಕೆಲವು ವರ್ಷ ಕೃಷಿಕರಾಗಿಯೂ ದುಡಿದರು. ಕೃಷಿಯೊಂದಿಗೆ ಸಾಮಾಜಿಕ ಸೇವೆಯ ನಂಟು ಓಸ್ಕರರನ್ನು ಅಂಟಿಕೊಂಡಿತು. ಸಮಾಜದ ವಿವಿಧ ವರ್ಗಗಳ ನೋವು ನಲಿವುಗಳಿಗೆ ಸ್ಪಂದಿಸಿದ ಓಸ್ಕರ್, ಶ್ರಮಜೀವಿಗಳ ಏಳಿಗೆಯ ಬಗ್ಗೆ ಅಪಾರ ಕನಸುಗಳನ್ನೂ ಕಟ್ಟಿಕೊಂಡಿದ್ದರು.
ಸಾರ್ವಜನಿಕ ಸೇವಾರಂಗಕ್ಕೆ ಪಾದಾರ್ಪಣೆ:
1972 ರಲ್ಲಿ ಓಸ್ಕರರ ಸಮಾಜ ಸೇವಾ ಕಾಳಜಿ ಒಂದು ನಿರ್ದಿಷ್ಟ ರೂಪ ಪಡೆಯಿತು. ಉಡುಪಿಯ ಪುರಸಭೆಗೆ ಇಲ್ಲಿನ ಸದಸ್ಯರಾಗಿ ಆಯ್ಕೆ ಮಾಡುವುದರ ಮೂಲಕ ಓಸ್ಕರರ ಸಮಾಜ ಸೇವಾ ಕಾರ್ಯಗಳಿಗೆ ಭದ್ರ ಬುನಾದಿ ಕಲ್ಪಿಸಿತು. ಈ ಹಂತದಿಂದಲೇ ಬೆಳೆಯುತ್ತಾ ಸಾಗಿದ ಓಸ್ಕರ್ ಅವರಿಗೆ ಲೋಕಸಭಾ ಸದಸ್ಯನಾಗುವ ಅವಕಾಶವೂ ಅತಿ ಶೀಘ್ರವಾಗಿ ಒಲಿಯಿತು. 1980 ರಲ್ಲಿ ಉಡುಪಿ ಕ್ಷೇತ್ರದಿಂದ ಭಾರೀ ಬಹುಮತದೊಂದಿಗೆ ವಿಜಯಶ್ರೀಯನ್ನು ಒಲಿಸಿ ಲೋಕಸಭೆಗೆ ಆಯ್ಕೆಯಾದ ಓಸ್ಕರ್, ಸತತ ಐದು ಬಾರಿ ಈ ಉನ್ನತ ಸ್ಥಾನವನ್ನು ಅಲಂಕರಿಸುವಲ್ಲಿ ಯಶಸ್ವಿಯಾದರು. ಈ ಅವಧಿಯಲ್ಲಿಯೇ ಪ್ರಧಾನಿಗಳಾಗಿದ್ದ ಶ್ರೀಮತಿ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರ ವಿಶ್ವಾಸಕ್ಕೂ ಪಾತ್ರರಾದರು. ಕೇಂದ್ರದ ವಿವಿಧ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದ ಓಸ್ಕರ್ ಕೆಲವು ಕಾಲ ರಾಜೀವ್ ಗಾಂಧಿಯವರ ಆಪ್ತಕಾರ್ಯದರ್ಶಿಗಳಾಗಿಯೂ ಸೇವೆ ಸಲ್ಲಿಸಿದರು.
ರಾಜ್ಯಸಭಾ ಸದಸ್ಯರಾಗಿ ಆಯ್ಕೆ:
ಆರನೇ ಬಾರಿಗೆ ಲೋಕಸಭೆ ಪ್ರವೇಶಿಸುವಲ್ಲಿ ಅಲ್ಪ ಮತಗಳ ಅಂತರದಿಂದ ವಿಫಲರಾದ ಓಸ್ಕರ್ ಸೋಲನ್ನು ಸೌಜನ್ಯಪೂರ್ವಕ ಸ್ವೀಕರಿಸಿದರು. ಈ ಸೋಲನ್ನೂ ಜನತೆಯ ಆಶೀರ್ವಾದ ಎಂಬರ್ಥದಲ್ಲಿ ಪರಿಗಣಿಸಿದರು. ಆದರೆ ಈ ಪರಾಭವ ಅವರ ಪಕ್ಷನಿಷ್ಠೆ ಮತ್ತು ಜನಸೇವಾ ಕಾಳಜಿಯನ್ನು ಮತ್ತಷ್ಟು ಎತ್ತರಕ್ಕೇರಿಸಿತು. ಓಸ್ಕರರ ಈ ಉದಾರಗುಣಗಳೇ ಅವರನ್ನು ಮತ್ತೊಮ್ಮೆ ದೆಹಲಿಯತ್ತ ಮುಖ ಮಾಡುವ ಅವಕಾಶ ಕಲ್ಪಿಸಿತು. ಅವರ ನಿಷ್ಕಳಂಕ ರಾಜಕಾರಣ, ಪಕ್ಷದ ಸಂಘಟನೆಯ ಬಗ್ಗೆ ಅವರಿಗಿದ್ದ ಪ್ರಾಮಾಣಿಕ ಕಳಕಳಿಗಳೇ ಅವರ ಕೈಹಿಡಿದವು. ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಓಸ್ಕರ್ ಈ ಸ್ಥಾನವನ್ನು ಇಂದೂ ಉಳಿಸಿಕೊಂಡಿದ್ದಾರೆ.
ಓಸ್ಕರರ ಪಕ್ಷನಿಷ್ಠೆ:
ಓಸ್ಕರ್ ರಾಜಕಾರಣದಲ್ಲಿ ಕೆಳಹಂತದಿಂದ ಎತ್ತರಕ್ಕೇರಿದವರು. ಮಹಾತ್ಮಾ ಗಾಂಧಿಯವರ ತತ್ತ್ವ, ಸಿದ್ಧಾಂತಗಳಲ್ಲಿ ವಿಶ್ವಾಸವಿಟ್ಟವರು. ಗಾಂಧೀಜಿಯವರ ಉಪದೇಶದಂತೆ ಸರಳ ಜೀವನಕ್ಕೆ ಒತ್ತು ನೀಡಿದವರು. ತನ್ನನ್ನು ಕೈಹಿಡಿದ ಪಕ್ಷಕ್ಕೆ ಪ್ರಾಮಾಣಿಕ ಸೇವೆ ಸಲ್ಲಿಸುವಲ್ಲಿ ಅಹರ್ನಿಶಿ ದುಡಿದವರು. ಈ ದೃಷ್ಟಿಯಿಂದ ಇವರ ಪಕ್ಷ ಕಾಳಜಿ ಇತರರಿಗೆ ಒಂದು ಮಾದರಿ. ಪಕ್ಷದ ಚಟುವಟಿಕೆಯಲ್ಲಿ ದಣಿವನ್ನೇ ಕಾಣದವರು. ರಾತ್ರಿ 12 ಗಂಟೆಯಾದರೂ ಪಕ್ಷದ ಕಾರ್ಯಚಟುವಟಿಕೆಗಳಿಗೆ ವಿಶ್ರಾಂತಿ ನೀಡಿದವರಲ್ಲ. ವಿಶೇಷ ಎಂದರೆ ಓಸ್ಕರರಿಗೆ ರಾಜಕಾರಣದಲ್ಲಿ ಮಂತ್ರಿ ಸ್ಥಾನದ ಕುರಿತು ಒಲವು ಕಡಿಮೆ. ಪಕ್ಷದ ಸಂಘಟನಾ ಚಟುವಟಿಕೆಗಳಲ್ಲಿಯೇ ವಿಶೇಷ ಆಸಕ್ತಿ. ಪಕ್ಷದ ವರಿಷ್ಠರ ಮೇಲೆ ಯಾವುದೇ ಹುದ್ದೆಗಾಗಿ ಒತ್ತಡ ಹೇರಿದವರೂ ಅಲ್ಲ. ಆದರೆ ಪಕ್ಷದ ವರಿಷ್ಠರು ಯಾವುದೇ ಜವಾಬ್ದಾರಿ ನೀಡಿದರೂ ಒಲ್ಲೆನೆನ್ನದೆ, ಆ ಹುದ್ದೆಯನ್ನು ಸಮರ್ಥವಾಗಿ ನಿರ್ವಹಿಸಿದವರು. ಅವರ ಈ ಗುಣಗಳೇ ಕಾಂಗೇಸ್ ಪಕ್ಷದ ಅಧಿನಾಯಕಿ ಶ್ರೀಮತಿ ಸೋನಿಯಾ ಗಾಂಧಿಯವರ ಮೆಚ್ಚುಗೆಗೂ ಪಾತ್ರವಾದವು. ಇದೀಗ ಶ್ರೀಮತಿ ಸೋನಿಯಾ ಗಾಂಧಿಯವರ ನಂಬಿಕೆಯ ನಾಯಕರಲ್ಲಿ ಒಬ್ಬರು ಓಸ್ಕರ್. ಅಖಿಲ ಭಾರತ ಕಾಂಗ್ರೇಸ್ ಪಕ್ಷದ ಕಾರ್ಯದಶರ್ಿಯಾಗಿ ಹಲವು ಬಾರಿ ಸೇವೆ ಸಲ್ಲಿಸಿದ ಓಸ್ಕರ್, ಪಕ್ಷ ಸಂಘಟನೆಯಲ್ಲಿ ಅಪಾರ ಕೊಡುಗೆ ನೀಡಿರುತ್ತಾರೆ. ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿಯ ಅಧ್ಯಕ್ಷತೆ, ಪಕ್ಷದ ಚುನಾವಣಾ ಸಮಿತಿಯ ಅಧ್ಯಕ್ಷತೆ ಹೀಗೆ ಹಲವು ಹೊಣೆಗಳ ಅನುಭವ ಓಸ್ಕರರಿಗಿದೆ. ಇತ್ತೀಚೆಗೆ ಕನರ್ಾಟಕದಲ್ಲಿ ನಡೆದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸೋನಿಯಾ ಆದೇಶದಂತೆ ಪ್ರಧಾನ ಉಸ್ತುವಾರಿಗಳಾಗಿ ಕೆಲಸ ಮಾಡಿದ ಓಸ್ಕರ್ ಕಾಂಗೇಸ್ ಅಭ್ಯರ್ಥಿ ಶ್ರೀ ಕೆ.ಜಯಪ್ರಕಾಶ್ ಹೆಗ್ಡೆಯವರನ್ನು ಗೆಲ್ಲಿಸುವಲ್ಲಿ ಯಶಸ್ವೀಯಾದರು. ಪಕ್ಷದ ವಿವಿಧ ಮಟ್ಟದ ಕಾರ್ಯಕರ್ತರನ್ನು ಒಂದುಗೂಡಿಸುವಲ್ಲಿ ಇವರ ಪಾತ್ರ ಇಲ್ಲಿ ನಿರ್ಣಾಯಕ. ಈ ವಿಜಯ ಪಕ್ಷದ ವರ್ಚಸ್ಸಿನೊಂದಿಗೆ ಓಸ್ಕರರ ವರ್ಚಸ್ಸನ್ನೂ ಹೆಚ್ಚಿಸಿತು.ಪಕ್ಷದ ನಾಯಕಿ ಶ್ರೀಮತಿ ಸೋನಿಯಾ ಗಾಂಧಿಯವರ ಅಪೇಕ್ಷೆಯಂತೆ ಕೇಂದ್ರ ಸರಕಾರದ ಕಾರ್ಮಿಕ ಸಚಿವರಾಗಿ, ಅಂಕಿಅಂಶ, ಕ್ರೀಡಾ ಸಚಿವರಾಗಿಯೂ ದುಡಿದ ಓಸ್ಕರ್, ಈ ಹೊಣೆಯನ್ನೂ ನಿಭಾಯಿಸುವಲ್ಲಿ ಎಡವಲಿಲ್ಲ.
ಸಂದ ಪ್ರಶಸ್ತಿಗಳು:
ಓಸ್ಕರ್ ದೇಶ ಮತ್ತು ವಿದೇಶಗಳ ನಾನಾ ಭಾಗಗಳನ್ನು ಸಂದಶರ್ಿಸಿದವರು. ದೇಶ ಮತ್ತು ವಿದೇಶದ ಹಲವು ಗೌರವಕ್ಕೂ ಪಾತ್ರರಾದವರು. ಇವರ ಸೇವೆಯನ್ನು ಗುರುತಿಸಿ ಹಲವು ಪ್ರಶಸ್ತಿಗಳೂ ಅವರನ್ನು ಅರಸಿಕೊಂಡು ಬಂದಿವೆ. ಸಿಂಡಿಕೇಟ್ ಬ್ಯಾಂಕಿನ ಕೃಷಿ ಪ್ರಶಸ್ತಿ, ನೆಲ್ಸನ್ ಮಂಡೇಲಾ ಪ್ರಶಸ್ತಿ., ಮಂಗಳೂರು ವಿ.ವಿ.ಯ ಗೌರವ ಡಾಕ್ಟರೇಟ್ ಹೀಗೆ ಹಲವು ಪುರಸ್ಕಾರಗಳಿಗೆ ಭಾಜನರಾಗಿರುತ್ತಾರೆ.
ಕಲಾಸಕ್ತ ರಾಷ್ಟ್ರನಾಯಕ:
ಓಸ್ಕರರು ಬಿಡುವಿಲ್ಲದ ರಾಜಕಾರಣದ ನಡುವೆಯೂ ಕಲಾಸಕ್ತಿಯನ್ನು ಕಳೆದು ಕೊಂಡವರಲ್ಲ. ಮೌತ್ ಆರ್ಗನ್ ಅವರ ನೆಚ್ಚಿನ ವಾದನ. ಸಭೆ, ಸಮಾರಂಭಗಳಲ್ಲಿ ಈ ವಾದನದ ಮೂಲಕ ಕೆಲವು ಹಾಡುಗಳನ್ನು ನುಡಿಸಿ, ಶ್ರೋತೃಗಳಿಂದ ಚಪ್ಪಾಳೆಯ ಸುರಿಮಳೆಗಳನ್ನು ಪಡೆದವರು. ಕುಚುಪುಡಿ ಮತ್ತು ಭರತನಾಟ್ಯ ಓಸ್ಕರರ ಇನ್ನೊಂದು ಹವ್ಯಾಸ. ಈ ಶಾಸ್ತ್ರೀಯ ನೃತ್ಯಗಳನ್ನು ಗುಮುಖೇನ ಕಲಿತ ಓಸ್ಕರ್ ಇಂದಿಗೂ ಇವುಗಳ ಅಭ್ಯಾಸಿ. ಕರಾವಳಿಯ ಹೆಮ್ಮೆಯ ಕಲೆಯಾದ ಯಕ್ಷಗಾನದಲ್ಲೂ ಗೆಜ್ಜೆ ಕಟ್ಟಿ ಕುಣಿದವರು. ಇದೀಗ ಓಸ್ಕರ್ ಯೋಗಾಭ್ಯಾಸಿ. ಯೋಗಾಸನಗಳನ್ನು ಯುವಕರೂ ನಾಚುವಂತೆ ಮಾಡಿ ತೋರಿಸಬಲ್ಲ ಓಸ್ಕರ್, ಅಲ್ಲಲ್ಲಿ ಯೋಗಾಸನ ಪ್ರಾತ್ಯಕ್ಷಿಕೆಗಳನ್ನೂ ನೀಡಿ ಜನರಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಓಸ್ಕರರ ಕೊಡುಗೆ:
ಕೊಂಕಣ ರೈಲ್ವೆ ಕಾಮಗಾರಿಯ ಆರಂಭದ ದಿನಗಳಲ್ಲಿ ಓಸ್ಕರ್ ಸಾಕಷ್ಟು ಹೋರಾಡಿದವರು. ಇದನ್ನು ಮಂಜೂರು ಮಾಡಿಸುವಲ್ಲಿ ಓಸ್ಕರರ ಶ್ರಮ ಅಪಾರ. ಉಡುಪಿಗೆ ಸುಸಜ್ಜಿತ ನೂತನ ತಂತ್ರಜ್ಞಾನಾಧಾರಿತ ವಿದ್ಯುನ್ಮಾನ ದೂರವಾಣಿ ಕೇಂದ್ರ ಓಸ್ಕರರ ಶ್ರಮದ ಫಲ. ಓ.ಎನ್.ಜಿ.ಸಿ., ಮಲ್ಪೆ ಬಂದರಿನ ಪ್ರಗತಿ, ಚತುಷ್ಪಥ ನಿರ್ಮಾಣ. ಹೀಗೆ ಹಲವು ಯೋಜನೆಗಳ ಹಿಂದೆ ಇವರ ಶ್ರಮವಡಗಿದೆ. ಅಡಿಕೆ, ಕಾಫಿ ಮತ್ತು ಭತ್ತದ ಬೆಳೆಗಾರರಿಗೆ ಸಮಸ್ಯೆಗಳು ಎದುರಾದಾಗಲೆಲ್ಲಾ ಓಸ್ಕರ್ ಕೇಂದ್ರದ ಗಮನಕ್ಕೆ ತಂದು ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿರುತ್ತಾರೆ.
ಸದಾ ಸರಳತೆ ಇವರ ಬಂಡವಾಳ:
ಬ್ಲೋಸಂ ಫೆರ್ನಾಂಡಿಸರನ್ನು ಕೈಹಿಡಿದ ಓಸ್ಕರ್ರಿಗೆ ಈಗ ಎರಡು ಮಕ್ಕಳು. ಒಬ್ಬ ಮಗ, ಒಬ್ಬಳು ಮಗಳು. ಮಡದಿ ಬ್ಲೋಸಂ ತನ್ನ ಪತಿಯ ಎಲ್ಲಾಕೆಲಸಗಳಿಗೆ ಸದಾ ಬೆಂಬಲವನ್ನೀಯುವವರು. ತನ್ನನ್ನು ಈ ಹಂತಕ್ಕೆ ಬೆಳೆಸುವಲ್ಲಿ ಸಹಕರಿಸಿದ ಎಲ್ಲಾ ಮತದಾರರು, ಕಾರ್ಯಕರ್ತರು ಮತ್ತು ಪಕ್ಷದ ನಾಯಕರ ಬಗ್ಗೆ ಓಸ್ಕರರಿಗೆ ಸದಾ ಗೌರವ. ಶ್ರೀಮತಿ ಸೋನಿಯಾ ಗಾಂಧಿಯವರ ನಿರಂತರ ಪ್ರೋತ್ಸಾಹಗಳನ್ನೂ ಸ್ಮರಿಸುತ್ತಾರೆ. ಉನ್ನತ ಸ್ಥಾನಕ್ಕೇರಿದರೂ ಅಹಂಕಾರದ ಸ್ಪರ್ಶವೇ ಇವರ ವ್ಯಕ್ತಿತ್ವದಲ್ಲಿಲ್ಲ. ಅಂದಿನ ಸರಳತನವೇ ಇಂದಿಗೂ ಇವರ ಆಸ್ತಿ. ಹಿತ ಮಿತವಾದ ಮಾತು, ಸಹನೆ, ತಾಳ್ಮೆ ಇವರ ವ್ಯಕ್ತಿತ್ವದ ಹೆಗ್ಗುರುತು. ಸುದೀರ್ಘ ಕಾಲದ ರಾಜಕಾರಣದಲ್ಲಿ ಕಳಂಕವಿಲ್ಲದ ಇವರ ಕಾರ್ಯವೈಖರಿ ಸದಾ ಸ್ತುತ್ಯರ್ಹ. ಮಹಾಮಾರಿ ಏಡ್ಸ್ ರೋಗದ ವಿರುದ್ಧ ಹೋರಾಟಕ್ಕಾಗಿ ರೂಪುಗೊಂಡ ಸಂಸದೀಯ ಸಮಿತಿಯ ಸಂಚಾಲಕರಾಗಿದ್ದ ಓಸ್ಕರ್ ಈಗ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಸಂಸದೀಯ ಸಮಿತಿಯ ಅಧ್ಯಕ್ಷರು.

ಡಾ.ಶ್ರೀಕಾಂತ ಸಿದ್ದಾಪುರ
.
ಶನಿವಾರ, ಸೆಪ್ಟೆಂಬರ್ 22, 2012
ಶನಿವಾರ, ಸೆಪ್ಟೆಂಬರ್ 8, 2012
ಭಾನುವಾರ, ಆಗಸ್ಟ್ 26, 2012
ಬುಧವಾರ, ಆಗಸ್ಟ್ 22, 2012
ಸೋಮವಾರ, ಆಗಸ್ಟ್ 20, 2012
ಶನಿವಾರ, ಜುಲೈ 14, 2012
ಮಂಗಳವಾರ, ಮೇ 29, 2012
LEONISSA.M.FERNANDES(16-01-1900 to 26-12-1990),Mother of Sri Oscar Fernandes, Honorable Rajya Sabha Member, Govt.of India & wife of Roque Fernandees, famous Head Master of Udupi. She was first lady bench magistrate of D.K.district. Lalalajpath roy in his book Unhappy India has mentioned her name for out standing achievements. This book was published in 1927 & immediatly banned by British Govt. Read book Roque Master of Udupi, for more informations.Oscar s/o Leonissa & Roque Fernandes in Yoga Postures
ಭಾನುವಾರ, ಮೇ 20, 2012
ಪ್ರೀತಿ ಹೆಜ್ಜೆಯಿಡುವ ಹಾದಿ ಹಿಂದೆ ಬರದ ಹಾದಿ- ಸತ್ಯವೇ?
ಪ್ರೀತಿಯೊಂದು ನಾಗಸ್ವರ
ಎಕ್ಕುಂಡಿಯವರ ನಾಗಿಯ ಕತೆ
ಸುಬ್ಬಣ್ಣ ರಂಗನಾಥ ಎಕ್ಕುಂಡಿಯವರ ಕಥನ ಕವನಗಳಲ್ಲಿ ಒಂದು ನಾಗಿಯ ಕತೆ. ಈ ಕವನದ ಪ್ರಧಾನ ವಸ್ತು ಪ್ರೀತಿ. ಕವನದ ನಾಯಕಿ ನಾಗಿ ಎಂಬ ಹೆಸರಿನ ತರುಣಿ. ಆಕೆಯ ನಿಜನಾಮ ನಾಗವೇಣಿ. ಪ್ರೀತಿ ಅಥವಾ ಪ್ರೇಮ ಎಷ್ಟು ಸೂಕ್ಷವಾದುದು?. ಹದಿಹರೆಯದವರನ್ನು ಯಾವ ಕ್ಷಣದಲ್ಲೂ ಆಕರ್ಷಿಸಬಹುದು. ಕೆಲವೊಮ್ಮೆ ಅವರ ಬದುಕನ್ನು ಶಾಶ್ವತವಾಗಿ ಅರಳಿಸಿದರೆ; ಕೆಲವು ಸಲ ಕೆಲವು ಕಾಲ ಬದುಕನ್ನು ಅರಳಿಸಿ ನರಳಿಸಬಹುದು.
ನಾಗಿ ಹಳ್ಳಿ ಪರಿಸರದಲ್ಲಿ ಬೆಳೆದ ಮುಗ್ಧ ಯುವತಿ. ಆಕರ್ಷಕ ರೂಪವನ್ನು ಹೊಂದಿದವಳು. ಹಳ್ಳಿಯ ಶ್ರಮಜೀವಿ ಮಂಜು ಗೌಡನ ಒಬ್ಬಳೇ ಮಗಳು. ತಂದೆಯಂತೆ ಈಕೆಯೂ ಶ್ರಮಜೀವಿ. ಹೆಸರಿಗೆ ಅನ್ವರ್ಥವಾಗಿ ಹಾವಿನಂತಹ ಜಡೆ ಉಳ್ಳವಳು. ತಾಯಿಯ ಆಸರೆಯಲ್ಲಿ ಹಳ್ಳಿ ಜೀವನಕ್ಕೆ ಹೊಂದಿಕೊಂಡವಳು. ಆದರೂ ಈ ಮುಗ್ಧ ಯುವತಿ ಪ್ರೇಮದ ಸುಳಿಯಿಂದ ಪಾರಾಗಲಿಲ್ಲ. ಸುಪ್ತವಾಗಿ ಯಾವುದೋ ಮೂಲೆಯಲ್ಲಿ ಅವಿತಿದ್ದ ಪ್ರೀತಿ ಅಥವಾ ಪ್ರೇಮ ಇಂತಹ ಮುಗ್ಧ ಹೆಣ್ಣುಮಗಳನ್ನೂ ಸೆಳೆಯಿತು ಎನ್ನುವುದರ ಮೂಲಕ ಕವಿ ಪ್ರೀತಿಯ ಶಕ್ತಿಯನ್ನು ಓದುಗರ ಮುಂದಿಡುತ್ತಾರೆ. ಈ ಕುರಿತಂತೆ ಪ್ರೇಮಿಗಳನ್ನು ಚಿಂತನೆಗೆ ಗುರಿಪಡಿಸುತ್ತವೆ..
ಕವನದ ಆರಂಭದ ಚರಣಗಳು ಯೌವನಕ್ಕೆ ಕಾಲಿಟ್ಟ ಹೆಣ್ಣಿನ ಮನಸ್ಸಿನ ಈ ಸುಪ್ತ ಬಯಕೆಗಳನ್ನು ಪ್ರೇರೇಪಿಸುವ ಪರಿಸರವನ್ನು ವರ್ಣಿಸುತ್ತದೆ. ಎತ್ತರದ ಬೆಟ್ಟದ ಸಾಲು, ಸುತ್ತ ತೆನೆ ಹೊತ್ತ ಹಸಿರು ಗದ್ದೆ, ಸಾಲು ಮರದ ನೆರಳಿನ ಹಾವಿನಂಥ ಹಾದಿ. ಈ ಪರಿಸರಗಳು ಆ ವಯಸ್ಸಿನಲ್ಲಿ ಸಹಜವಾಗಿ ಸುಪ್ತವಾದ ಬಯಕೆಯ ಉದ್ದೀಪನಕ್ಕೆ ವೇದಿಕೆ ನಿರ್ಮಿಸುತ್ತವೆ. (ನಾಗಿಯಂತಹ ಹಳ್ಳಿಯ ಮುಗ್ಧ ಯುವತಿಗೆ ಅಂದು ಈ ಪರಿಸರ ಪ್ರೇರಣೆ ನೀಡಿದರೆ; ಆಧುನಿಕ ಪರಿಸರದಲ್ಲಿ ಮೊಬೈಲ್, ಫೇಸ್ಬುಕ್, ದೂರದರ್ಶನದ ದಾರಾವಾಹಿ, ಚಲನಚಿತ್ರಗಳು ಪ್ರೀತಿಗೆ ಪೂರಕವಾದ ವಾತಾವರಣವನ್ನು ನಿರ್ಮಿಸುತ್ತವೆ.)
ಕವನದ ಮುಂದಿನ ಕೆಲವು ಸಾಲುಗಳು ನಾಗಿಯ ರೂಪವನ್ನು ವರ್ಣಿಸಲು ಮೀಸಲಾಗಿವೆ. ಅವಳ ಬೊಗಸೆ ಕಣ್ಣು, ಗಲ್ಲದ ಮೇಲಿನ ಮಲ್ಲಿಗೆಯಂತಹ ನಗೆ, ಜಡೆಯ ತುಂಬಾ ಮುಡಿದ ಮಲ್ಲಿಗೆಯ ಕಂಪು, ನೂರು ಬಗೆಯ ನಗೆ ಹೀಗೆ ಆಕೆಯ ರೂಪಲಾವಣ್ಯ ಎಂತಹವರನ್ನೂ ಸೆಳೆಯದೇ ಬಿಡದು. ಕವಿ ತಿಳಿಸುವಂತೆ ಅವಳು ಹುಲ್ಲು ಹೊರೆ ಹೊತ್ತು ಸಾಗುವಾಗ ಸೂರ್ಯನು ನೆತ್ತಿಗೆ ನಿಂತರೂ ತಣ್ಣಗಾದನಂತೆ. ಈ ಸಾಲೇ ಆಕೆಯ ಅಪ್ರತಿಮ ಸೌಂದರ್ಯಕ್ಕೆ ಸಾಕ್ಷಿ ಎನ್ನಬಹುದು.
ಹೀಗೆ ಯೌವನಕ್ಕೆ ಕಾಲಿಟ್ಟ ನಾಗಿಯ ಎದೆಗೆ ಪ್ರೀತಿ ಲಗ್ಗೆ ಇಟ್ಟ ಚಿತ್ರಣ ಮುಂದಿನದ್ದು. ಗೇರು ಹೂವಿನಂತೆ ಗುಂಪು ಗುಂಪಾಗಿ ಪ್ರೀತಿ ಈಕೆಯ ಎದೆಯ ಮೇಲೆ ಲಗ್ಗೆ ಇಟ್ಟಿತು ಎಂಬ ಕವಿವಾಣಿ ಪ್ರೀತಿ ಎಷ್ಟು ತೀವ್ರವಾಗಿ ಈ ವಯಸ್ಸಿನಲ್ಲಿರುವವರನ್ನು ಪ್ರಭಾವಿಸುತ್ತದೆ ಎಂಬುದನ್ನು ಚಿತ್ರಿಸುವಂತಿದೆ. ಆಕೆಯ ಬದುಕಿನಲ್ಲಿ ಬದಲಾವಣೆಗೆ ಕಾರಣವಾದ ಪ್ರೀತಿ ದಾಳಿ ನಡೆಸಿದ್ದು ಆ ಊರಿನ ಜಾತ್ರೆಯ ಸಂದರ್ಭದಲ್ಲಿ. ಹಳ್ಳಿಗಳಲ್ಲಿ ವರ್ಷಕ್ಕೊಮ್ಮೆ ಬರುವ ಜಾತ್ರೆ ಎಂದರೆ ಏನೋ ಸಂಭ್ರಮ. ವಸಂತ ಕಾಲವು ಪ್ರಕೃತಿಯಲ್ಲಿ ತಂದ ಸಂತಸದಂತೆ. ಹೊಸ ಉಡುಗೆಯನ್ನು ಧರಿಸಿ ಖುಷಿ ಪಡುವ ಸಮಯ. ಜಾತ್ರೆಯ ಸಂಭ್ರಮ ಎಲ್ಲರಂತೆ ಮುಗ್ಧ ಯುವತಿ ನಾಗಿಯನ್ನೂ ಬಿಡಲಿಲ್ಲ. ನಾಗಿಯೂ ಹಸಿರು ಸೀರೆ ಉಟ್ಟಿದ್ದಳು. ಇಂದ್ರ ದನುವಿನಂತೆ ಹೊಳೆವ ರವಕೆ ತೊಟ್ಟಿದ್ದಳು. ಅಂದು ಉತ್ಸಾಹದಿಂದ ಬೆಳಗ್ಗೆ ಬೇಗನೆ ಎದ್ದು ಜಾತ್ರೆಗೆ ತೆರಳುವ ಸಿದ್ಧತೆ ನಡೆಸಿದ್ದಳು. ಹೀಗೆ ಶೃಂಗರಿಸಿಕೊಂಡು ಸಾಗಿದ ಆಕೆಯ ಸುಪ್ತ ಬಯಕೆಗೆ ಜಾತ್ರೆಯು ಹೊಸ ತಿರುವು ನೀಡುವ ಕ್ಷಣವಾದುದು ಕಾವ್ಯದ ಪ್ರಮುಖ ಅಂಶ.
ಜಾತ್ರೆಯಲ್ಲಿ ತಾಯಿಯೊಂದಿಗೆ ಸುತ್ತುತ್ತಾ ಸಾಗಿದ ನಾಗಿಯ ದೃಷ್ಟಿಯು ಸ್ತ್ರೀ ಸಹಜವಾದ ಬಯಕೆಯಂತೆ ಸೀರೆ ಅಂಗಡಿಯ ಮೇಲೆ ಬಿದ್ದಿತು. ಸೀರೆ ಅಂಗಡಿಯ ಬಣ್ಣ ಬಣ್ಣದ ಸೀರೆಗಳು ನಾಗಿಯನ್ನು ಮುಂದೆ ಸಾಗದಂತೆ ತಡೆದು ನಿಲ್ಲಿಸಿದವು. ಒಂದು ಕ್ಷಣ ಸೀರೆಗಳನ್ನೇ ನೋಡುತ್ತಾ ನಿಂತಳು. ಆದರೆ ಆಕೆಯ ದೃಷ್ಟಿ ಸೀರೆಗೇ ಸೀಮಿತವಾಗಲಿಲ್ಲ. ಸೀರೆಗಳನ್ನು ವೀಕ್ಷಿಸುತ್ತಾ ನಾಗಿಯ ಕಣ್ಣು ಅರಿವಿಲ್ಲದಂತೆ ಸೀರೆ ಮಾರುವ ಯುವಕನ ಮೇಲೆ ಬಿತ್ತು. 'ಸೀರೆ ಬೇಕೇ ಸೀರೆ' ಎಂಬ ಆತನ ಕೂಗು ನಾಗಿಯ ಕಿವಿಯನ್ನು ಪ್ರವೇಶಿಸಿ ಅವ್ಯಕ್ತವಾದ ಭಾವನಾ ತರಂಗಗಳನ್ನೆಬ್ಬಿಸಿತು. ಆತನೂ ಚಿಗುರು ಮೀಸೆಯವನು. ಎಳೆಯ ನಗೆ ಹೊತ್ತವನು. ಆತನೂ ನಾಗಿಯನ್ನು ಒಂದು ಕ್ಷಣ ನೋಡಿದನು. ನಾಗಿಯ ರೂಪು ಆತನ ಎದೆಯ ಕದವನ್ನು ತಟ್ಟಿತು. ಕಣ್ಣು ಕಣ್ಣು ಕೂಡಿತು. ಮಿಂಚು ಝಳಪಿಸಿತು. ಹೊಂಚು ಹಾಕುತ್ತಿದ್ದ ಪ್ರೀತಿ ಎಂಬ ಸಿಡಿಲು ಇವರಿಬ್ಬರಿಗೂ ಹೊಡೆಯಿತು.
ಕವನದ ಈ ಚರಣಗಳನ್ನು ಗಮನಿಸಿದಾಗ ಪ್ರೀತಿ ಎಂಬುದು ಕುರುಡು ಎಂಬ ಮಾತನ್ನೇ ಮತ್ತೆ ಮತ್ತೆ ನೆನಪಿಸುವಂತಿವೆ. ಈ ಕ್ಷಣದಲ್ಲಿ ಬುದ್ಧಿ ಶೂನ್ಯವಾಗಬಹುದು. ಹೃದಯ ಭಾವನೆಗಳ ಬೀಡಾಗಬಹುದು. ತಂದೆ, ತಾಯಿ, ಬಂಧುಬಳಗ ಇತ್ಯಾದಿ ಸಂಬಂಧಗಳೆಲ್ಲವೂ ದೂರವಾಗಬಹುದು. ಈ ಪ್ರಬಲ ಶಕ್ತಿ ಪ್ರೀತಿಯ ಈ ಕ್ಷಣಕ್ಕಿದೆ. ನಾಗಿಯನ್ನು ಯಾವ ರೇವಿಗೊಯ್ಯಿತೋ ಎಂಬ ಕವಿಯ ಮಾತು ಇದನ್ನೇ ಪುಷ್ಟೀಕರಿಸುವಂತಿದೆ. ಹಾಗಾಗಿಯೇ ಪ್ರೀತಿ ಎಂಬುದು ಕವಿಯ ಪ್ರಕಾರ ಸಿಡಿಲಿನಂತೆ. ಇದು ಹೊತ್ತಿ ಉರಿವ ಪಂಜಿನಂತೆ. ಪ್ರೇಮಿಗಳ ಬದುಕಿನ ಭವಿಷ್ಯವು ಈ ಸಂದರ್ಭವನ್ನು ಸ್ವೀಕರಿಸುವ ಅವರ ಮನ: ಸ್ಥಿತಿಯ ಮೇಲೆ ನಿಂತಿದೆ.
ಜಾತ್ರೆಯ ಒಂದು ಕ್ಷಣದ ನೋಟವೇ ನಾಗಿಯ ಮನಸ್ಸನ್ನು ಕೆಡಿಸಿತು. ಅಂದಿನಿಂದ ಅವಳು ಎಂದಿನ ನಾಗಿಯಲ್ಲ. ಅವಳ ಮನದ ತುಂಬಾ ಸೀರೆ ಮಾರುತ್ತಿದ್ದ ಯುವಕನ ನೆನಪು. ಅವಳ ಕಿವಿಯ ತುಂಬಾ ಆತನ ಸೀರೆ ಬೇಕೇ ಎಂಬ ಕೂಗು. ಹೀಗೆ ಮುಂದುವರಿದ ಕವನದ ಕೊನೆಯಲ್ಲಿ ನಾಗಿ ನಾಪತ್ತೆಯಾಗುವ ಚಿತ್ರಣವಿದೆ. ಇದರ ಅರಿವಿರದ ಮಂಜು ಗೌಡ ದಂಪತಿಗಳು ನಾಗಿಯ ನಾಪತ್ತೆಯಿಂದ ಕಂಗಾಲಾಗುತ್ತಾರೆ. ನಾಪತ್ತೆಯಾದ ನಾಗಿಗಾಗಿ ಅವರ ಹುಡುಕಾಟದೊಂದಿಗೆ ಕವನ ಕೊನೆಗೊಳ್ಳುತ್ತದೆ.
ಕವಿ ಎಕ್ಕುಂಡಿಯವರು ಪ್ರೀತಿಯ ಶಕ್ತಿ ಮತ್ತು ನಾಗಿಯ ನಾಪತ್ತೆಗಳನ್ನಷ್ಟೇ ಕವನದಲ್ಲಿ ಹೇಳಿ ಮುಕ್ತಾಯಗೊಳಿಸುತ್ತಾರೆ. ಇದರ ಬಗ್ಗೆ ಯಾವುದೇ ನಿಲುವನ್ನು ತಾಳುವ ಸ್ವಾತಂತ್ರ್ಯವನ್ನು ಓದುಗರಿಗೇ ಬಿಡುತ್ತಾರೆ. ಆದರೂ ಕವನದ ಕೆಲವು ಸಾಲುಗಳು ಓದುಗರನ್ನು ವಿವಿಧ ಚಿಂತನೆಗೆ ಹಚ್ಚಿಸಲು ಸಹಾಯವಾಗುವಂತಿವೆ. ನಾಗಿಯಂತಹ ಮುಗ್ಧ ಯುವತಿಯನ್ನು ಪ್ರೀತಿಯ ನಾಗಸ್ವರ ದಿಕ್ಕು ತಪ್ಪಿಸಿತು ಎಂಬುದು ಕವನದಲ್ಲಿ ಕಾಣಿಸುವ ಒಂದು ಸಾಮಾನ್ಯ ಅಂಶ. 'ಯಾರು ಹಾಕಿ ಹೋದರವಳ ಎದೆಗೆ ಗಂಧ ಧೂಪವ?' 'ಯಾರು ಹೊತ್ತಿಸಿಟ್ಟರೊಳಗೆ ಬಂಗಾರದ ದೀಪವ?' 'ಪ್ರೀತಿ ಪಂಜು ಹೊತ್ತಿಸಿತ್ತು ನಾಗವೇಣಿ ನಾಗಿಗೆ' ಎಂಬ ಸಾಲುಗಳು ಹಳ್ಳಿಯ ಮುಗ್ಧ ಯುವತಿ ನಾಗಿಯ ಬಗ್ಗೆ ಅನುಕಂಪವನ್ನು ಸೂಚಿಸುವಂತಿವೆ. ಕವನದಲ್ಲಿ ಬರುವ 'ಪ್ರೀತಿ ಹೊತ್ತಿಸಿಟ್ಟ ದೀಪ, ದಾರಿಯಲ್ಲು ಕತ್ತಲು' 'ಕತ್ತಲಲ್ಲಿ ಎಡಹುವಂತೆ ದೀಪವಾರಿತು' 'ದೀಪ ನಿಲ್ಲಬಹುದೇ ಗಾಳಿ ಬಂದು ಮುತ್ತಲು' ಮೊದಲಾದ ಸಾಲುಗಳು ಕುರುಡು ಪ್ರೀತಿಯ ವಿರುದ್ಧ ಜಾಗರೂಕರಾಗಿರುವಂತೆ ಯುವಸಮುದಾಯವನ್ನು ಎಚ್ಚರಿಸುವಂತಿವೆ. ಇಂತಹ ಕ್ಷಣಿಕ ಪ್ರೀತಿಗೊಳಗಾದ ಯುವ ಜೋಡಿ ಜೀವನದ ಕೊನೆಯವರೆಗೂ ಒಂದಾಗಿ ಬಾಳಿಯಾರೇ? ಎಂಬುದರತ್ತ ಚಿಂತಿಸುವಂತೆ ಮಾಡುತ್ತವೆ. 'ಪ್ರೀತಿ ಹೆಜ್ಜೆಯಿಡುವ ಹಾದಿ, ಹಿಂದೆ ಬರದ ಹಾದಿಯು' ಎಂಬ ಸಾಲು ಪ್ರೀತಿಯ ತೀವ್ರತೆಯನ್ನು ವಿವರಿಸುವುದರೊಂದಿಗೆ, ನಾಪತ್ತೆಯಂತಹ ಪ್ರಕರಣಗಳು ಹೆಚ್ಚುತ್ತಿರುವ ಸಮಕಾಲೀನ ಸಂದರ್ಭದಲ್ಲಿ ಹೆಚ್ಚು ಚಿಂತನಾರ್ಹವಾಗಿವೆ. 'ಇಲ್ಲೆ ಅಲ್ಲವೇನು ಹೆಣ್ಣಿಗಿರುವ ಭಯ ಅನಾದಿಯು' ಎಂಬ ಸಾಲು ಸ್ತ್ರೀಯರ ಕುರಿತಂತೆ ಮನುವಿನ ನಿಲುವನ್ನು ಮತ್ತೊಮ್ಮೆ ವಿಮಶರ್ೆಗೆ ಒಡ್ಡುವಂತಿದೆ. ಸ್ತ್ರೀ ತನ್ನ ಬಗ್ಗೆ ತಾನೇ ಜಾಗರೂಕಳಾಗಿ ಚಿಂತಿಸುವುದರ ಮೂಲಕವೇ ಮಾನಸಿಕ ಮತ್ತು ದೈಹಿಕವಾದ ಗುಲಾಮಗಿರಿಯಿಂದ ಹೊರಬರಬೇಕಾಗಿದೆ. ಅದರಲ್ಲಿಯೇ ಆಕೆಯ ಸ್ವಾತಂತ್ರ್ಯದ ಸತ್ತ್ವ ಅಡಗಿದೆ.
ನರಸಿಂಹಸ್ವಾಮಿಯವರು 'ಪ್ರೇಮವೆನಲು ಹಾಸ್ಯವೇ' ಎಂದು ತಮ್ಮ ಕವಿತೆಯೊಂದರಲ್ಲಿ ಪ್ರಶ್ನಿಸುತ್ತಾರೆ. ಆಧುನಿಕ ಕಾಲದಲ್ಲಿ ಅನೇಕ ಮುಗ್ಧ ಯುವತಿಯರ ಪಾಲಿಗೆ ಪ್ರೇಮವೇ ಪಾಶವಾಗುತ್ತಿರುವುದು ದುರಂತ. ಪ್ರೇಮದ ಹೆಸರಿನಲ್ಲಿ ವಂಚಿಸುವ ಪ್ರಯತ್ನದ ವಿರುದ್ಧ ಯುವತಿಯರು ಜಾಗೃತರಾಗಬೇಕಾಗಿದೆ. ಕೃತಕವಾದ ಆಕರ್ಷಣೆಗಳಿಗೆ ಒಳಗಾಗದೇ ಎಚ್ಚರದಿಂದ ಹೆಜ್ಜೆ ಇಡಬೇಕೆಂಬುದೇ ಕವಿಯ ಸಂದೇಶವಾಗಿರಬಹುದಲ್ಲವೇ?.
ಡಾ.ಶ್ರೀಕಾಂತ್ ಸಿದ್ದಾಪುರ
ಗುರುವಾರ, ಮಾರ್ಚ್ 1, 2012
ಭಾನುವಾರ, ಫೆಬ್ರವರಿ 19, 2012
ಡಾ. ಕಂಬಾರರಿಗೆ ಪಿಪಿಸಿಯಲ್ಲಿ ಸಂಮಾನ
ಡಾ.ಕಂಬಾರ ಮತ್ತು ಕನ್ನಡ
ಡಾ.ಚಂದ್ರಶೇಖರ ಕಂಬಾರರಿಗೆ ಇತ್ತೀಚೆಗಷ್ಟೇ ಜ್ಞಾನಪೀಠ ಪ್ರಶಸ್ತಿ ಲಭಿಸಿತು. ಉಡುಪಿ ಮತ್ತು ಕಂಬಾರರ ನಡುವೆ ಬಲವಾದ ಬಾಂಧವ್ಯದ ಬೆಸುಗೆ ಇದೆ. ಅವರು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದವರು. 1968 ರಲ್ಲಿ ಕನ್ನಡ ಅಧ್ಯಾಪಕರಾಗಿದ್ದ ಡಾ.ಕಂಬಾರರು ಫೆಬ್ರವರಿ 18 ರಂದು ತಾನು ಸೇವೆ ಸಲ್ಲಿಸಿದ ಸಂಸ್ಥೆಯ ಆಹ್ವಾನದ ಮೇರೆಗೆ ಉಡುಪಿಗೆ ಆಗಮಿಸುತ್ತಿದ್ದಾರೆ. ಪೂರ್ಣಪ್ರಜ್ಞ ಆಡಳಿತ ಸಮಿತಿಯು ಡಾ. ಕಂಬಾರರನ್ನು ಅಂದು ಅಭಿನಂದಿಸಲಿದೆ. ಉಡುಪಿ ಶ್ರೀ ಅದಮಾರುಮಠ ಶಿಕ್ಷಣ ಮಂಡಳಿಯ ಅಧ್ಯಕ್ಷರಾಗಿರುವ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಕಂಬಾರರನ್ನು ಅಭಿನಂದಿಸಿ ಆಶೀರ್ವಚಿಸಲಿದ್ದಾರೆ.
ಮೊಕಾಶಿ,ಅಡಿಗ ಮತ್ತು ಕಂಬಾರ : ಡಾ. ಕಂಬಾರರು ಉಡುಪಿಯ ಪಿಪಿಸಿಗೆ ಬರುವ ಮೊದಲು ಸಾಗರದ ಕಾಲೇಜಿನಲ್ಲಿದ್ದರು. ಗೋಪಾಲಕೃಷ್ಣ ಅಡಿಗರ ಸೂಚನೆಯಂತೆ ಉಡುಪಿಯ ಪಿಪಿಸಿಗೆ ಕನ್ನಡ ಅಧ್ಯಾಪಕರಾಗಿ ಆಗಮಿಸಿದರು.ಆಗ ಖ್ಯಾತ ವಿಮರ್ಶಕ ಶಂಕರ್ಮೊಕಾಶಿ ಪುಣೇಕರ್ ಕಾಲೇಜಿನ ಪ್ರಾಂಶುಪಾಲರು.ಸುಮಾರು ಒಂದು ವರ್ಷ ದುಡಿದ ಕಂಬಾರರಿಗೆ ಅನಂತರ ಅಮೆರಿಕಾದ ಚಿಕಾಗೋಗೆ ಹೋಗುವ ಅವಕಾಶ ಒದಗಿ ಬಂತು.ಈ ಸಂದರ್ಭದಲ್ಲಿ ಅವರನ್ನು ಹರಸಿ ಸಹಕರಿಸಿದವರು ಅದಮಾರುಮಠದ ಶ್ರೀ ಶ್ರೀ ವಿಬುಧೇಶತೀರ್ಥ ಶ್ರೀಪಾದರು.ಅಮೆರಿಕಾದಿಂದ ಮರಳಿದ ನಂತರ ಶ್ರೀ ಶ್ರೀ ವಿಬುಧೇಶತೀರ್ಥರು ಕಂಬಾರರನ್ನು ಸನ್ಮಾನಿಸಿದ್ದರು.
ಎಲಿಯಟ್ ಆಗಲಿಲ್ಲ; ಕಂಬಾರನಾದೆ :
ಡಾ. ಕಂಬಾರರು ಕನ್ನಡ ನುಡಿ ಮತ್ತು ಇಲ್ಲಿನ ದೇಶೀಯ ಸಂಸ್ಕೃತಿಗಳ ಬಗ್ಗೆ ಅಪಾರ ಗೌರವ ಹೊಂದಿದ್ದವರು. ಅವರ ಸಾಹಿತ್ಯ ಸಾಧನೆಗೆ ಪ್ರಮುಖ ಪ್ರೇರಣೆಯೇ ಜಾನಪದ ಸಂಪತ್ತು.ಪಿಪಿಸಿಯನ್ನು ಬಿಡುವ ಮೊದಲು ಕೆಲವು ದಿನಗಳ ಕಾಲ ಅಡಿಗರ ಒಡನಾಟದಲ್ಲಿ ಕಂಬಾರರು ಕನ್ನಡ ಅಧ್ಯಾಪಕರಾಗಿ ದುಡಿದ್ದಿದ್ದರು. ಆಗ ನವ್ಯದ ಕಾಲ. ಕಂಬಾರರ ಮೇಲೂ ನವ್ಯದ ಪ್ರಭಾವ ಬೀರಿತ್ತು. ಆದರೆ ನವ್ಯದ ಈ ಪ್ರಭಾವ ಕಂಬಾರರ ದೇಶೀಯತೆಯನ್ನು ಬಲಿ ತೆಗೆದುಕೊಳ್ಳಲಿಲ್ಲ. ಅವರೇ ಒಂದು ಕಡೆ ಹೀಗೆ ಹೇಳುತ್ತಾರೆ.ನವ್ಯರು ಎಲಿಯಟ್ ತರಹ ಬರೆಯಲು ಆರಂಭಿಸಿದರೆ,ನಾನು ಹೇಳತೇನ ಕೇಳ ಬರೆದು ಎಲಿಯಟ್ ಬದಲು ಕಂಬಾರನಾದೆ.ನನ್ನ ಸಂಸ್ಕೃತಿಯನ್ನು ಹೇಗೆ ಪ್ರೀತಿಸಬೇಕು ಅನ್ನೋದು ನನಗೆ ಮುಖ್ಯ.ಎಲಿಯಟ್ನನ್ನು ಕಾಪಿ ಮಾಡೋದಲ್ಲ. ನನ್ನ ಹಳ್ಳಿಯನ್ನು ನಾವು ಪ್ರೀತಿಸದಿದ್ದರೆ ಮತ್ಯಾರು ಪ್ರೀತಿಸುತ್ತಾರೆ?. ಹಾಗಾಗಿ ನವ್ಯದ ಕಾವಿನ ನಡುವೆ ನವ್ಯಕ್ಕಿಂತ ಭಿನ್ನವಾಗಿ ಬರೆದ ಕಂಬಾರರು ದೇಶೀಯ ಸಂಸ್ಕೃತಿಯ ಆಳವಾದ ಅಪ್ಪುಗೆಯಿಂದ ಹೊರಬರಲಿಲ್ಲ.
ಕಾವ್ಯವನ್ನು ಓದು ಕಂಬಾರ : ಡಾ.ಕಂಬಾರರಿಗೆ ಅಡಿಗರ ಮೇಲೆ ಗೌರವವಿತ್ತು.ಅವರ ಕಾವ್ಯವನ್ನು ಮೆಚ್ಚಿಕೊಂಡಿದ್ದರು. ಅಡಿಗರು ಆಗಾಗ ಕಂಬಾರರನ್ನು ಕೆಣಕುತ್ತಿದ್ದರು.ನೀನು ಕಾವ್ಯವನ್ನು ಓದು.ಹಾಡಬೇಡ.ನವ್ಯ ಕಾವ್ಯಗಳು ಹಾಡುವಿಕೆಗಿಂತ ಓದಲಿಕ್ಕೇ ಹೆಚ್ಚು ಸೂಕ್ತವಾದವುಗಳು.ಆದರೆ ಸಭೆಯಲ್ಲಿ ಕಂಬಾರರು ಕಾವ್ಯ ಓದಿದರೆ ಹಾಡಿ ಎಂಬ ಬೇಡಿಕೆ.ಕಂಬಾರರ ಕಾವ್ಯದಲ್ಲಿದ್ದ ಜಾನಪದ ಸತ್ವ, ಅದರ ಧಾಟಿ, ಅವರ ತುಂಬುಕಂಠ ಓದುವುದಕ್ಕಿಂತ ಹಾಡುವುದಕ್ಕೇ ಹೇಳಿ ಮಾಡಿಸಿದಂತಿತ್ತು.
ಕಾವ್ಯ ಹೃದಯದ ಭಾಷೆ : ಕಂಬಾರರ ದೃಷ್ಟಿಯಲ್ಲಿ ಕಾವ್ಯ ಹೃದಯಕ್ಕೆ ನಾಟುವಂತಿರಬೇಕು.ಅದು ಕೇವಲ ಬೌದ್ಧಿಕ ಕಸರತ್ತಾಗಿರಬಾರದು. ಒಮ್ಮೆ ಜೀನ್ಸ್ ಪ್ಯಾಂಟ್ ಧರಿಸಿದ ಕವಿಯೊಬ್ಬ ಕಂಬಾರರನ್ನು ಭೇಟಿಯಾದನಂತೆ. ಆಗ ಅವರ ಪ್ರಶ್ನೆ- ತಲೀ ಒಳಗ ಏನಿದ್ಯೋ ತಮ್ಮಾ?.ಮಿದುಳಿದೆ ಸಾರ್ ಕವಿಯ ಉತ್ತರ.ಥೂ !ನಿನ್ನ ಕವಿ ಹೃದಯದೊಳಗ ಹೃದಯ ಇರಬೇಕೋ ತಮ್ಮಾ ಎಂಬುದು ಕಂಬಾರರ ಉಪದೇಶ.ಕಂಬಾರರು ಹೇಳುವಂತೆ ಕಾವ್ಯ ಅಂದ್ರೆ ಶುದ್ಧಾಂಗ ಶಬ್ದವನ್ನೇ ನಂಬಿರುವ ಮಾಧ್ಯಮ. ಕಾವ್ಯ ರಚನೆ ಅಂದ್ರೆ ಒಂದು ಬಗೆಯ ತಪಸ್ಸು ಮಾಡಿದ ಹಾಗೆ.ತಪಸ್ಸು ಮಾಡಬೇಕು. ಅದರ ಮೂಲಕ ಶಬ್ದಗಳಲ್ಲಿ ಮಾಂತ್ರಿಕ ಶಕ್ತಿ ತುಂಬಬೇಕು. ಮಂತ್ರಗಳಲ್ಲಿ ದೇವತೆಗಳನ್ನು ಅಡಗಿಸಿರಲಿಲ್ಲವೇ?. ಹಾಗೆ.
ಕನ್ನಡ ಕಟ್ಟುವ ಕನಸು :
1992 ರಿಂದ 98 ರ ತನಕ ಹಂಪಿ ಕನ್ನಡ ವಿ.ವಿ. ಯ ಉಪಕುಲಪತಿಗಳಾಗಿದ್ದ ಕಂಬಾರರಿಗೆ ಕನ್ನಡವನ್ನು ಕಟ್ಟಬೇಕೆಂಬ ಕನಸು. ಹಂಪಿಯ ಮೊದಲ ಉಪಕುಲಪತಿಗಳಾಗಿ ನೇಮಕಗೊಂಡ ಕಂಬಾರರು ಕನ್ನಡ ಭಾಷೆ ಮತ್ತು ದೇಶಿ ಸಂಸ್ಕೃತಿಯ ಉಳಿವಿಗೆ ಶ್ರಮಿಸಿದರು.ಉಪಕುಲಪತಿಗಳಾದಾಗ ಅವರ ಕನಸನ್ನು ಅವರೇ ಹೇಳಿಕೊಂಡಿದ್ದಾರೆ. ಹಂಪಿಯೊಳಗ ಕನ್ನಡ ಕಟ್ತೀನಿ,ಕನ್ನಡ ಸಂಸ್ಕೃತಿ ಮತ್ತೆ ತರ್ತೀನಿ.ಅವರ ಕನಸಿನ ಫಲವೇ ಕನ್ನಡ ಜಾನಪದ ವಿಶ್ವಕೋಶ. ಕುರ್ತಕೋಟಿಯವರು ಕಂಬಾರರ ಕುರಿತು ಒಂದು ಕಡೆ ಹೇಳುವ ಮಾತುಗಳಿಲ್ಲಿ ಗಮನಾರ್ಹ. ಕಂಬಾರರ ಮಹಾಕಾವ್ಯಗಳು ಎರಡು. ಚಕೋರಿ ಮತ್ತು ಕನ್ನಡ ವಿಶ್ವವಿದ್ಯಾನಿಲಯ.ಕಂಬಾರರ ಕನ್ನಡಾಭಿಮಾನ ಅವರ ಮಾತುಗಳಲ್ಲೇ ಕೇಳೋಣ.ನಾನು ಏನು ಹೇಳಬೇಕೋ ಅದನ್ನು ಹೇಳುವುದಕ್ಕೆ ಕನ್ನಡದಲ್ಲಿ ಶಕ್ತಿಯಿದೆ. ಅರ್ಥವಂತಿಕೆ ಕಟ್ಟಿಕೊಡುವ ಶಕ್ತಿ ನನ್ನ ಭಾಷೆಗಿದೆ. ನನ್ನ ಕನ್ನಡ ಭಾಷೆ, ಕನ್ನಡ ಅನುಭವದ ಮೇಲೆ ನನಗೆ ನಂಬಿಕೆ ಇದೆ.
ಜಾಗತೀಕರಣ ದೇಶೀಯ ಸಂಸ್ಕೃತಿಗೆ ಮಾರಕ : ಕನ್ನಡ ನೆಲದ ಶ್ರೀಮಂತ ಸಂಸ್ಕೃತಿಯಾದ ದೇಶೀಯತೆಯನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಲು ಕಂಬಾರರು ಸಿದ್ಧರಿರಲಿಲ್ಲ.ಜಾಗತೀಕರಣದಿಂದ ಈ ಶ್ರೀಮಂತ ಸಂಸ್ಕೃತಿ ನಾಶವಾದೀತೆಂಬ ಭಯ. ಹಾಗಾಗಿ ಕಟುವಾದ ಮಾತುಗಳಲ್ಲೇ ಜಾಗತೀಕರಣವನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ.ಅವರ ಪ್ರಕಾರ ಜಾಗತೀಕರಣ ಎಂದರೆ ಅಮೆರಿಕಾಮಯ.ಅಮೆರಿಕಾದಲ್ಲಿ ಜಾನಪದ ಇಲ್ಲ.ಅಲ್ಲಿ ಒಂದು ಒಳ್ಳೆಯ ಕತೆ ಹುಟ್ಟಲು ಸಾಧ್ಯವಿಲ್ಲ.ಹಾಗಾಗಿ ಅವರು ಶೌಚಾಲಯದ ಮೇಲಿನ ಬರಹವನ್ನೇ ಜಾನಪದ ಎನ್ನಬಹುದು.ಆದರೆ ನಮ್ಮದು ಇದಕ್ಕಿಂತ ಭಿನ್ನವಾದುದು.ಜಾಗತೀಕರಣದ ಮುಷ್ಟಿಯಿಂದ ಅದು ಮುಕ್ತವಾಗಬೇಕು.
ಕಂಬಾರರ ಕೃತಿಗಳಲ್ಲಿ ಇಲ್ಲಿನ ಗ್ರಾಮೀಣ ಸಂಸ್ಕೃತಿ ಮತ್ತು ನೆಲದ ಪ್ರೀತಿಯ ಸೆಳೆತವಿದೆ. ಸೊಗಸಾದ ಗ್ರಾಮೀಣ ಭಾಷೆಯ ಕಂಪಿದೆ.ಆಧುನಿಕ ಶಿಕ್ಷಣ,ಜಾಗತೀಕರಣ,ಪಾಶ್ಚಾತ್ಯಸಂಸ್ಕೃತಿಗಳ ದಟ್ಟಪ್ರಭಾವಗಳ ನಡುವೆಯೂ ಕಂಬಾರರು ದೇಶೀಯತೆಯ ದಾರಿ ತನ್ನದು ಎಂದರು.ಅದರಂತೆ ಬರೆದರು.ಈ ಹಿನ್ನೆಲೆಯಲ್ಲಿ ಇವರಿಗೆ ದೊರೆತ ಜ್ಞಾನಪೀಠ ಪ್ರಶಸ್ತಿ ಇಲ್ಲಿನ ಶ್ರೀಮಂತ ದೇಶೀಯ ಸಂಸ್ಕೃತಿಗೆ ಸಂದ ಗೌರವವೆನ್ನಲು ಹೆಮ್ಮೆ ಎನಿಸುತ್ತಿದೆ.
(18-02-2012 ರ ವಿಜಯಕರ್ನಾಟಕದಲ್ಲಿ ಪ್ರಕಟವಾದ ಲೇಖನ)
(ಆಧಾರ ಗ್ರಂಥ : ಶಿವಾಪುರ ಕಂಬಾರ ನಮಸ್ಕಾರ)

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)